Job Description: * ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧ ನೌಕೆ ವಿಕ್ರಾಂತ್ ತನ್ನ ಮೊದಲ ಸಮುದ್ರ ಪ್ರಯೋಗವನ್ನು ಆರಂಭಿಸಿದೆ, ಇದೀಗ ಇದು ಕೊಚ್ಚಿಯ ಸಮುದ್ರದಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದೆ. * 2022 ರ ಅವಧಿಗೆ ಭಾರತದ ನೌಕಾಪಡೆಗೆ INS ವಿಕ್ರಾಂತ್ ಸೇರ್ಪಡೆಗೊಳ್ಳಲು ಸಿದ್ಧವಾಗಿದೆ. * ಭಾರತದಲ್ಲಿ ವಿನ್ಯಾಸಗೊಂಡು ನಿರ್ಮಾಣವಾಗಿರುವ ದೇಶದ ಅತ್ಯಂತ ದೊಡ್ಡ, ಸಂಕೀರ್ಣ ಯುದ್ಧನೌಕೆ ಇದಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ 1999 ರಲ್ಲಿ ಈ ಯುದ್ಧನೌಕೆಯ ವಿನ್ಯಾಸ ಆರಂಭಿಸಲಾಗಿತ್ತು, ಇದರ ನಿರ್ಮಾಣದ ಕಾರ್ಯವು 2009 ರ ಫೆಬ್ರವರಿಯಲ್ಲಿ ಆರಂಭಗೊಂಡಿತು. * 2013 ರ ಆಗಸ್ಟ್ 12 ರಂದು ಯುದ್ಧನೌಕೆಯನ್ನು ಉದ್ಘಾಟಿಣೆ ಮಾಡಲಾಯಿತು, ಹಾಗೂ 2020 ರ ಡಿಸೆಂಬರ್'ನಲ್ಲಿ ಬೇಸಿನ್ ಟ್ರಯಲ್'ನ್ನು ಪೂರ್ಣಗೊಳಿಸಲಾಯಿತು, ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 23,000 ಕೋಟಿ ರೂ. ವೆಚ್ಚದಲ್ಲಿ ಯುದ್ಧನೌಕೆ ವಿಕ್ರಾಂತ್ ನಿರ್ಮಾಣವಾಗಿದೆ. * ಪ್ರಸ್ತುತ ಭಾರತದ ಕಡಲತೀರದ ಹಿತಾಸಕ್ತಿಗಳನ್ನು ಕಾಪಾಡಲು ಈ ಯುದ್ಧನೌಕೆ ಬಳಸಲಾಗುತ್ತದೆ, ಆತ್ಮನಿರ್ಭರ ಭಾರತ್ ಹಾಗೂ ಮೇಕ್ ಇನ್ ಇಂಡಿಯಾದ ಭಾಗವಾಗಿ ಇದನ್ನು ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ಅವರು ತಿಳಿಸಿದ್ದಾರೆ.