Job Description: * ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪೋಲೆಂಡ್ನ ಅನಿಟಾ ವ್ಲೊಡಾರ್ಕ್ಜಿಕ್ ಅವರು ಒಲಿಂಪಿಕ್ಸ್ನ ಟ್ರ್ಯಾಕ್ ಅಂಡ್ ಫೀಲ್ಡ್ನ ಒಂದೇ ಕ್ರೀಡೆಯಲ್ಲಿ ಸತತವಾಗಿ 3 ನೇ ಬಾರಿ ಚಿನ್ನದ ಪದಕವನ್ನು ಜಯಿಸಿದ ಮೊದಲ ಮಹಿಳಾ ಅಥ್ಲೀಟ್ ಇವರಾಗಿದ್ದಾರೆ. * ಟೋಕಿಯೊ ಒಲಿಂಪಿಕ್ ಕ್ರೀಡೆಗಳ ಹ್ಯಾಮರ್ ಥ್ರೊ ಸ್ಪರ್ಧೆಯಲ್ಲಿ ಪೋಲೆಂಡ್ನ ಅನಿಟಾ ವ್ಲೊಡಾರ್ಕ್ಜಿಕ್ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪೋಲೆಂಡ್ನ ಅನಿಟಾ ವ್ಲೊಡಾರ್ಕ್ಜಿಕ್ ಈ ಅಥ್ಲೀಟ್ 2012 ರ ಲಂಡನ್ ಹಾಗೂ 2016 ರ ರಿಯೊ ಕ್ರೀಡೆಗಳಲ್ಲೂ ಹ್ಯಾಮರ್ ಥ್ರೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು, ಇದೀಗ ಇದು ಇವರ ಹ್ಯಾಮರ್ ಥ್ರೊ ಕ್ರೀಡೆಯಲ್ಲಿನ ಹ್ಯಾಟ್ರಿಕ್ ಸಾಧನೆಯಾಗಿದೆ. * ಚೀನಾದ ವಾಂಗ್ ಝೆಂಗ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. - ಪೋಲೆಂಡ್ನ ಬೇರೆ ಸ್ಪರ್ಧಿ ಮಲ್ವಿನಾ ಕಪ್ರೋನ್ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ.