Job Description: * ಸ್ಮಾರ್ಟ್ ಸಿಟಿ ಉಪಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಎರಡು ಪ್ರಮುಖ ಯೋಜನೆಗಳು ಬೃಹತ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಶನ್ (GVMC)ನ ಅಡಿಯಲ್ಲಿ ಉದ್ಘಾಟನೆಯಾಗಲು ಸಿದ್ಧವಾಗಿವೆ. * ಈ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೀಚ್ ರಸ್ತೆಯಲ್ಲಿ ವಿಎಂಆರ್ಡಿಎ ಪಾರ್ಕ್ ಹಾಗೂ ಜಗದಂಬ ಜಂಕ್ಷನ್ನಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿವೆ. * ಬಹು-ಹಂತದ ಕಾರ್ ಪಾರ್ಕಿಂಗ್ ಯೋಜನೆ(Multi Level car parkinga Project) - MLCP ಯೋಜನೆಯು ಬೃಹತ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಶನ್ ನ ಪ್ರತಿಷ್ಠಿತ ಯೋಜನೆಯಲ್ಲಿ ಇದು ಒಂದಾಗಿದೆ. * ವಿಶಾಖಪಟ್ಟಣಂ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ( VMRDA ಪಾರ್ಕ್) ಈ ಉದ್ಯಾನವನ GVMC ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು, ಈ ಉದ್ಯಾನವು 33 ಎಕರೆಗಳಲ್ಲಿ ವಿಸ್ತಾರವಾಗಿ ಹರಡಿದೆ ಹಾಗೂ ಎಲ್ಲಾ ವಲಯಗಳ ಜನರಿಗೆ ಮೂರು ವಲಯಗಳಲ್ಲಿ 33 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. * ಭಾರತ ಸರ್ಕಾರವು 2015 ರಲ್ಲಿ ನಗರ ಕಾರ್ಯಗಳನ್ನು ಸಂಯೋಜಿಸುವ ಉದ್ದೇಶದಿಂದ ಈ ಸ್ಮಾರ್ಟ್ ಸಿಟಿ ಮಿಷನ್ ಪ್ರಾರಂಭಿಸಿದೆ.