Job Description: * ಪ್ರಸ್ತುತ ಭಾರತೀಯ ಮೂಲದ 11 ವರ್ಷದ ಅಮೆರಿಕನ್ ಬಾಲೆ ನತಾಶಾ ಪೇರಿ ಅವರು ಇದೀಗ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಮಾನ್ಯತೆಯನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಅಮೇರಿಕದ ಉನ್ನತ ವಿಶ್ವವಿದ್ಯಾಲಯ ನಡೆಸುವ ಸ್ಕಾಲಸ್ಟಿಕ್ ಅಸ್ಸೇಸ್ಮೆಂಟ್ ಟೆಸ್ಟ್ ಹಾಗೂ ಅಮೆರಿಕನ್ ಕಾಲೇಜ್ ಟೆಸ್ಟಿಂಗ್ ಪರೀಕ್ಷೆಯಲ್ಲಿ ನೀಡಿದ ಅದ್ವಿತೀಯ ಫಲಿತಾಂಶ ವನ್ನು ಪರಿಗಣಿ ಈ ನತಾಶಾ ಪೇರಿ ಬಾಲೆಯನ್ನು ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. * ಅಮೇರಿಕದ ಉನ್ನತ ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಯಲ್ಲಿ ಎಸ್ಎಟಿ ಮತ್ತು ಎಸಿಟಿ ಪರೀಕ್ಷೆಯಲ್ಲಿ ಸುಮಾರು 84 ದೇಶಗಳ ಅಂದಾಜು 19,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.