Job Description: * ಪ್ರಸ್ತುತ ಟೋಕಿಯೊ ಒಲಿಂಪಿಕ್ಸ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಹಾಕಿ ತಂಡವು ಸೆಮಿಪೈನಲ್ ಹಂತವನ್ನು ತಲುಪಿತ್ತು, ಆದರೆ ಈ ಸೆಮಿಪೈನಲ್ ಹಂತದಲ್ಲಿ ಭಾರತ ಹಾಕಿ ತಂಡವು ವಿಶ್ವ ಚಾಂಪಿಯನ್ ಬೆಲ್ಜಿಯಂ ಹಾಕಿ ತಂಡದ ವಿರುದ್ಧ ಸೋಲ ಅನುಭವಿಸಿದೆ. * ಇದೀಗ ಭಾರತ ಹಾಕಿ ತಂಡವು ಕಂಚಿನ ಪದಕ ಪಡೆಯುವ ನಿರೀಕ್ಷೆಯಲ್ಲಿದೆ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರುಟ್ವೀಟ್ ಮೂಲಕ ಟೀಮ್ ಇಂಡಿಯಾಕ್ಕೆ ಶುಭ ಕೋರಿದ್ದಾರೆ. * ಪ್ರಸ್ತುತ ಪ್ರಧಾನಿ ಮೋದಿ ಅವರು 'ಗೆಲುವು ಮತ್ತು ಸೋಲುಗಳು ಜೀವನದ ಒಂದು ಭಾಗವಾಗಿದೆ' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. * ಕಂಚಿನ ಪದಕಕ್ಕಾಗಿ 2 ನೇ ಸೆಮಿಪೈನಲ್ ನಲ್ಲಿ ಸೋತ ತಂಡದ ವಿರುದ್ಧ ಭಾರತ ಹಾಕಿ ತಂಡ ಆಟವಾಡಲಿದೆ.