Job Description: * 2021 ರ ಆಗಸ್ಟ್. 2 ರಂದು ಲೋಕಸಭೆಯುಲ್ಲಿ 'ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ'ಯನ್ನು ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. * ಇದೀಗ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳಲ್ಲಿ ತನ್ನ ಪಾಲನ್ನು ಕಡಿಮೆ ಮಾಡಲು ಮತ್ತು ಅಗತ್ಯ ಸಂಪನ್ಮೂಲಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರವು ಜನರಲ್ ಇನ್ಶೂರೆನ್ಸ್ ಬಿಸಿನೆಸ್ ತಿದ್ದುಪಡಿ ಮಸೂದೆ 2021 ನ್ನು ಅಂಗೀಕರಿಸಿದೆ. * ಸಾರ್ವಜನಿಕ ವಲಯದ ವಿಮಾ ಕಂಪನಿಗಳಲ್ಲಿ ಹೆಚ್ಚಿನ ಖಾಸಗಿ ಭಾಗವಹಿಸುವಿಕೆಯನ್ನು ಆಕರ್ಷಿಸಲು, ಹಾಗೂ ಸಾಮಾಜಿಕ ರಕ್ಷಣೆಯನ್ನು ನೀಡಲು ಈ ಮಸೂದೆಯ ತಿದ್ದುಪಡಿ ಅಗತ್ಯವಾಗಿವೆ ಎಂದು ಸರ್ಕಾರ ತಿಳಿಸಿದೆ. * ಕೇಂದ್ರ ಸರ್ಕಾರವು ಈ ಮಸೂದೆಯನ್ನು ಸರ್ಕಾರದ ಖಾಸಗೀಕರಣಕ್ಕೆ ಅನುಗುಣವಾಗಿ ಅಂಗೀಕರಿಸಲಾಗಿದೆ, ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಾಸಗೀಕರಣದ ಕಾರ್ಯಸೂಚಿಯನ್ನು ಘೋಷಣೆ ಮಾಡಿದ್ದಾರೆ. * 2021 ರ ಜುಲೈ. 30 ರಂದು ಸಾಮಾನ್ಯ ವಿಮಾ ವ್ಯವಹಾರ ತಿದ್ದುಪಡಿ ಮಸೂದೆ 2021 ನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. * 1972 ರ ಸಾಮಾನ್ಯ ವಿಮಾ ವ್ಯವಹಾರ ಕಾಯಿದೆ ಅಡಿಯಲ್ಲಿ ನಿಯಂತ್ರಿಸಲ್ಪಡುವ ಸಾರ್ವಜನಿಕ ವಲಯದ ವಿಮಾ ಕಂಪನಿಗಳಲ್ಲಿ ಹೆಚ್ಚಿನ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಈ ಮಸೂದೆ ಒದಗಿಸಲಿದೆ ಎಂದು ತಿಳಿಸಿದ್ದಾರೆ.