Job Description: * ಪ್ರಸ್ತುತ ಭಾರತದಲ್ಲಿ ಆಗಸ್ಟ್. 01 ರಂದು ಮುಸ್ಲಿಂ ಮಹಿಳಾ ಹಕ್ಕುಗಳ ದಿನವನ್ನು ಆಚರಿಸಲಾಗಿತ್ತದೆ. * 2019 ರ ಆಗಸ್ಟ್. 1ರಂದು ಸಂಸತ್ತಿನಲ್ಲಿ ಅನುಮೋದನೆಯಾಗಿರುವ ತ್ರಿವಳಿ ತಲಾಖ್ ಮಸೂದೆಯ ಹಿನ್ನೆಲೆಯಿಂದ ಮುಸ್ಲಿಂ ಮಹಿಳಾ ಹಕ್ಕುಗಳ ದಿನವನ್ನು ಆಗಸ್ಟ್ 1 ರಂದು ಆಚರಿಸಲಾಗುತ್ತದೆ. * ತ್ರಿವಳಿ ತಲಾಖ್ ಎನ್ನುವ ಮಸೂದೆಯು ಮುಸ್ಲಿಂ ಮಹಿಳೆಯರನ್ನು ವಿಚ್ಛೇದನದ ರೂಪದಲ್ಲಿನ ಬಂದ ಸಾಮಾಜಿಕ ದುಶ್ಚಟಗಳ ಸಂಕೋಲೆಯಾಗಿತ್ತು ಇದೀಗ ಇದರಿಂದ ಮುಸ್ಲಿಂ ಮಹಿಳೆಯರನ್ನು ಮುಕ್ತಗೊಳಿಸಲಾಗಿದೆ. * ತ್ರಿವಳಿ ತಲಾಖ್ ಕಾನೂನು 'ತ್ರಿವಳಿ ತಲಾಖ್' ನ್ನು ಕ್ರಿಮಿನಲ್ ಅಪರಾಧ ಎಂದು ಮಾಡಿದೆ, ಮುಸ್ಲಿಂ ಮಹಿಳೆಯರ ರಕ್ಷಣೆ ಹಾಗೂ ಕಾನೂನುಬದ್ಧವಾಗಿ ತಲಾಖ್ ಪದ್ಧತಿಯ ಅಪರಾಧವಾಗಿಸುತ್ತದೆ, ಈ ಕಾರಣದಿಂದ ಈ ದಿನವನ್ನು ಮುಸ್ಲಿಂ ಮಹಿಳಾ ಹಕ್ಕುಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. * ತ್ರಿವಳಿ ತಲಾಖ್ ಕಾಯ್ದೆಯ ಪ್ರಕಾರ, ತಲಾಕ್ ಘೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ, ಹಾಗೂ ಕಾನೂನಿನ ಅಡಿಯಲ್ಲಿ ದಂಡ ಹಾಗೂ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. * ಹಲವು ದೇಶಗಳು ತ್ರಿವಳಿ ತಲಾಖ್ ನ್ನು ನಿಷೇಧಿಸಿವೆ: ಮೊದಲ ಈಜಿಪ್ಟ್ ದೇಶವು 1929 ರಲ್ಲಿ ತ್ರಿವಳಿ ತಲಾಖ್ ನ್ನು ನಿಷೇಧಿಸಿದೆ, ನಂತರ ದಿನಗಳಲ್ಲಿ ಅಂದರೆ 1956 ರಲ್ಲಿ ಸುಡಾನ್, ಪಾಕಿಸ್ತಾನ, ಮಲೇಷ್ಯಾ 1969 ರಲ್ಲಿ, ಬಾಂಗ್ಲಾದೇಶವು 1972 ರಲ್ಲಿ, ಇರಾಕ್ ರಾಷ್ಟ್ರವು 1959 ರಲ್ಲಿ, ಹಾಗೂ ಸಿರಿಯಾ ರಾಷ್ಟ್ರವು 1953 ರಲ್ಲಿ, ಇದೀಗ ಈ ಪಟ್ಟಿಗೆ ಭಾರತವು ಕೂಡ ಸೇರಿದೆ.