Job Description: * ತಿತಾಗರ್ ವ್ಯಾಗನ್ಸ್ ಲಿಮಿಟೆಡ್ ಇಟಲಿಯಲ್ಲಿ ತನ್ನ ಘಟಕವನ್ನು ಹೊಂದಿದೆ, ಈ ಘಟಕವು ಪುಣೆ ಮೆಟ್ರೋ ಕೋಚ್ಗಾಗಿ ಮೊದಲ ಹಗುರವಾದ ರೈಲನ್ನು ಸಿದ್ದಪಡಿಸಿದೆ. * ಇಟಲಿಯಿಂದ ಒಟ್ಟು 34 ರೈಲುಗಳನ್ನು ಕಳುಹಿಸಲಾಗಿದೆ, ಈ ಎಲ್ಲ ರೈಲುಗಳು ಮೂರು ಬೋಗಿಗಳನ್ನು ಒಳಗೊಂಡಿರುತ್ತದೆ. * ಪ್ರಸ್ತುತ ಈ ಮೆಟ್ರೋ ರೈಲುಗಳನ್ನು ವರ್ಚುವಲ್ ಸಭೆಯ ಮೂಲಕ ಬಿಡುಗಡೆ ಮಾಡಲಾಗಿದೆ, ಈ ಸಭೆಯಲ್ಲಿ ಇಟಲಿಯ ಭಾರತದ ರಾಯಭಾರಿ ನೀನಾ ಮಲ್ಹೋತ್ರಾ ಮತ್ತು ಭಾರತದಲ್ಲಿನ ಇಟಲಿಯ ರಾಯಭಾರಿ ವಿನ್ಸೆಂಜೊ ಡಿ ಲುಕಾ ಪಾಲ್ಗೊಂಡಿದ್ದರು. * ಪುಣೆ ಮೆಟ್ರೋಗೆ ನೀಡಲಿರುವ ಮೆಟ್ರೋ ಕೋಚ್ಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ. * ಉದಾಹರೆಣೆ ನಾಗಪುರ-ಮೆಟ್ರೋ 16T ಆಕ್ಸಲ್ ಲೋಡ್'ನ ಹಗುರವಾದ ಕೋಚ್ಗಳಿಗಿಂತಲೂ, ಇವುಗಳು 15.5T ಆಕ್ಸಲ್ ಲೋಡ್ ಹೊಂದಿ ಹಗುರವಾಗಿರುತ್ತವೆ. * ತಿತಾಗರ್ ವ್ಯಾಗನ್ಸ್ ಎಂಬುವದು ಪಶ್ಚಿಮ ಬಂಗಾಳದ ತಿತಾಗರ್ ಮೂಲದ ರೈಲ್ವೆ ವ್ಯಾಗನ್ ತಯಾರಕ ಘಟಕವಾಗಿದೆ, ಈ ಘಟಕದಲ್ಲಿ ಭಾರತೀಯ ರೈಲ್ವೇಸ್, ಬೈಲಿ ಸೇತುವೆಗಳು, ಹಾಗೂ ಗಣಿಗಾರಿಕೆ ಉಪಕರಣಗಳಿಗೆ ಕೋಚ್ಗಳನ್ನು ತಯಾರಿಸಲಾಗುತ್ತದೆ.