Job Description: * ಪ್ರಸ್ತುತ ಇಸ್ರೋ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಹಾಗೂ ರೋವರ್ ಇಳಿಸುವ 'ಚಂದ್ರಯಾನ-3' ಗಗನಯಾನವು 2022 ರ ಅಂತ್ಯದಲ್ಲಿ ನಡೆಯುವ ಎಲ್ಲ ಲಕ್ಷಣಗಳಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. * ಚಂದ್ರಯಾನ್ -3 ಎಂಬುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯೋಜಿತ ಮೂರನೇ ಚಂದ್ರ ಪರಿಶೋಧನಾ ಕಾರ್ಯಾಚರಣೆಯಾಗಿದೆ. * ಈ 'ಚಂದ್ರಯಾನ್ -3' ಕೋವಿಡ್-19 ಕಾರಣದಿಂದಾಗಿ ಈ ಯೋಜನೆಯ ಕಾರ್ಯವು ಕುಂಠಿತವಾಗಿತ್ತು, ಆದರೆ ಇದೀಗ ಈ ಚಂದ್ರಯಾನ-3 ಯೋಜನೆಯ ಉಡಾವಣೆಯ ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರ ರೂಪದಲ್ಲಿ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. * ಈ ಹಿಂದೆ 2019 ರ ಜುಲೈ 22 ರಂದು 'ಚಂದ್ರಯಾನ-2' ಉಡಾವಣೆ ಮಾಡಲಾಗಿತ್ತು, ಆದರೆ ಲ್ಯಾಂಡರ್ ಇಳಿಸುವಲ್ಲಿ ಕೊನೆಯಾ ಕ್ಷಣದಲ್ಲಿ ಇಸ್ರೊದ ಕಾರ್ಯ ವಿಫಲವಾಗಿತ್ತು.