Job Description: * ಪ್ರಸ್ತುತ ದೆಹಲಿ ಸರ್ಕಾರವು ಈ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ, ಪ್ರಶಸ್ತಿಗಳಿಗಾಗಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಹೆಸರುಗಳನ್ನು ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. * ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಹಾಗೂ ಗೌರವ ವಂದನೆಗಳನ್ನು ತಿಳಿಸಲು ಈ ನಿರ್ಧಾರವನ್ನು ಕೈಗೊಳ್ಳಾಗಿದೆ ಎಂದು ತಿಳಿಸಿದ್ದಾರೆ. * ಸಾರ್ವಜನಿಕರು ಹೆಸರುಗಳನ್ನು padmaawards.delhi@gmail.com ಗೆ ಆಗಸ್ಟ್. 15 ಮೇಲ್ ಮಾಡಬಹುದಾಗಿದೆ, ಇದಕ್ಕಾಗಿಯೇ ಪರಾಮರ್ಶಕ ಸಮಿತಿಯನ್ನು ರಚಿಸಲಾಗಿದೆ, ಈ ಸಮಿತಿಯು ಆಗಸ್ಟ್. 15 ರ ಬಳಿಕ ಈ ಪಟ್ಟಿ ಬಿಡುಗಡೆ ಮಾಡಲಿದೆ, ಹಾಗೂ ಅಂತಿಮ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.