Job Description: * ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸಿಂಧೂ ಕಣಿವೆಯ ಹರಪ್ಪ ನಾಗರೀಕತೆ ಯುಗದ ಧೋಲಾವಿರಾ ನಗರವನ್ನು ಸೇರ್ಪಡೆಮಾಡಿದೆ. * ಗುಜರಾತ್ ರಾಜ್ಯದ ರಾಣ್ ಜಿಲ್ಲೆಯ ಕಚ್ ಎಂಬಲ್ಲಿ ಧೋಲಾವಿರಾ ನಗರವಿದೆ, ಪ್ರಸ್ತುತ ಈ ನಗರವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ ಮಾಡಲಾಗುವದು ಎಂದು ಯುನೆಸ್ಕೊ (ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ) ಘೋಷಣೆ ಮಾಡಿದೆ. * ಯುನೆಸ್ಕೋ ಇತ್ತೀಚಿಗೆ ತೆಲಂಗಾಣ ರಾಜ್ಯದ ಕಾಕತೀಯ ರಾಮಪ್ಪ ದೇಗುಲವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ ಮಾಡಿತ್ತು. * ಧೋಲಾವಿರಾ ನಗರವು ಇದೀಗ ಭಾರತಕ್ಕೆ ದೊರೆತ 40 ನೇ ವಿಶ್ವ ಪಾರಂಪರಿಕ ತಾಣವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. * 2014 ರಿಂದ ಒಟ್ಟಾರೆ ಭಾರತದ ಹತ್ತು ಹೊಸ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ. * ಈ ಧೋಲಾವಿರಾ ನಗರಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದೇ, ತಾಂತ್ರಿಕತೆ, ಹಾಗೂ ಹರಪ್ಪ ನಾಗರೀಕತೆ, ಸಂಸ್ಕೃತಿಯನ್ನು ಎತ್ತಿತೋರಿಸುತ್ತಿರುವ ಧೋಲಾವಿರಾ ನಗರ ಇದೀಗ ವಿಶ್ವಪಾರಂಪರಿಕ ತಾಣವಾಗಿದೆ ಎಂದು ಯುನೊಸ್ಕೊ ತಿಳಿಸಿದೆ.