Job Description: * ಎರಡು ದಿನಗಳ ಭಾರತ ಪ್ರವಾಸವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಕೈಗೊಂಡಿದ್ದಾರೆ. * ಆಂಟನಿ ಬ್ಲಿಂಕೆನ್ ಅವರು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಭಾರತ ಭೇಟಿ ನೀಡುತ್ತಿದ್ದಾರೆ, ಅಮೇರಿಕಾ ಅಧ್ಯಕ್ಷರಾಗಿ ಜೋ ಬಿಡೆನ್ ಅಧಿಕಾರಕ್ಕೆ ವಹಿಸಿಕೊಂಡ ನಂತರ ಭಾರತಕ್ಕೆ ಭೇಟಿಯಾದ ಮೂರನೇ ಅಮೇರಿಕಾ ಅಧಿಕಾರಿ ಯಾಗಿದ್ದಾರೆ. * ಪ್ರಸ್ತುತ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿಯಾಗಿರುವ ಬ್ಲಿಂಕೆನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಅವರನ್ನು ಭೇಟಿಯಾಗಲಿದ್ದಾರೆ. * ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರ ಭೇಟಿಯ ದ್ವಿಪಕ್ಷೀಯ ಸಂವಾದವನ್ನು ನಡೆಸಲಿದ್ದಾರೆ, ಹಾಗೂ ಭಾರತ- ಅಮೇರಿಕ ರಾಷ್ಟ್ರಗಳ ಸಹಭಾಗಿತ್ವವನ್ನು ಹೆಚ್ಚಿಸಲು ಈ ಭೇಟಿ ಸಹಾಯಕಾರಿಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.