Job Description: * ಪ್ರಸ್ತುತ ಬಾಂಗ್ಲಾ ದೇಶವು ಸಾಮಾಜಿಕ ಜಾಲತಾಣ ಫೇಸ್ಬುಕ್ಗೆ ಪರ್ಯಾಯವಾಗಿರುವ ‘ಜೋಗಾಜಾಗ್’ ಹಾಗೂ ವಾಟ್ಸಾಪ್'ಗೆ ಪರ್ಯಾಯವಾಗಲಿರುವ ‘ಅಲಾಪಾನ್’ ಎಂಬ ಹೆಸರಿನ ಬಾಂಗ್ಲಾದೇಶ ತನ್ನದೇ ಆದ ಸಾಮಾಜಿಕ ಜಾಲತಾಣಗಳನ್ನೂ ಆರಂಭಿಸಲಿದೆ, ಹಾಗೂ ಆನ್ಲೈನ್ನಲ್ಲಿ ಜೂಮ್ ಆನ್ಲೈನ್'ಗೆ ಪರ್ಯಾಯವಾಗಿ ಬೋಯಿಥೋಕ್ ಅಪ್ಲಿಕೇಶನ್ ಹಾಗೂ ಲಸಿಕೆ ನೋಂದಣಿ ಮಾಡಲು ಸುರೋಖಾ ಆ್ಯಪ್ ಪ್ರಾರಂಭಿಸಲಿದೆ ಎಂದು ಇದೇ 24 ರಂದು ಬಾಂಗ್ಲಾದೇಶದ ರಾಜ್ಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವರಾದ ಜುನೈದ್ ಅಹ್ಮದ್ ಪಾಲಾಕ್ ಅವರು ಘೋಷಣೆ ಮಾಡಿದರು. * ದೇಶದ ಡಿಜಿಟಲ್ ಇ-ಕಾಮರ್ಸ್ 2018 ರ ನೀತಿಯು 2021 ರ ವೇಳೆಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ.