Job Description: * ಭಾರತದ ಏಕೈಕ ಜಿಮ್ನಾಸ್ಟ್ ಪಟು ಪ್ರಣತಿ ನಾಯಕ್ ಅವರು ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ನಲ್ಲಿ ನಡೆದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್ಗೆ ಅರ್ಹತೆಯನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. * ಈ ಬಾರಿಯ ಟೋಕಿಯೊ ಒಲಿಂಪಿಕ್ಸ್'ನಲ್ಲಿ ನಡೆಯಲಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಆಲ್-ರೌಂಡ್ ಫೈನಲ್ಸ್ಗೆ ಅಗ್ರ 24 ಜಿಮ್ನಾಸ್ಟ್ಗಳು ಜುಲೈ 29 ರಂದು ಅರ್ಹತೆ ಪಡೆದುಕೊಂಡಿದ್ದಾರೆ. * ಈ ಮೊದಲು ದೀಪಾ ಕರ್ಮಾಕರ್ ಅವರು 2016 ರ ರಿಯೊ ಒಲಿಂಪಿಕ್ಸ್ನ ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಅರ್ಹತೆ ಪಡೆದುಕೊಂಡಿದ್ದರು, ಇದೀಗ 2020 ರ ಟೋಕಿಯೊ ಒಲಿಂಪಿಕ್ಸ್ಗೆ ಪ್ರಣತಿ ನಾಯಕ್ ಅವರು ಅರ್ಹತೆ ಪಡೆದ ಭಾರತದ 2 ನೇ ಮಹಿಳಾ ಸ್ಪರ್ಧಿ ಇವರಾಗಿದ್ದಾರೆ. * ಪ್ರಣತಿ ನಾಯಕ್ ಅವರು 2019 ರಲ್ಲಿ ನಡೆದ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ಶಿಪ್ನ ವಾಲ್ಟ್ ವಿಭಾಗದಲ್ಲಿ ಪ್ರಣತಿ ಕಂಚಿನ ಪದಕ ಜಯಿಸಿದ್ದರು.