Job Description: * ಮೇರಿ ಕೋಮ್, ಮನ್ ಪ್ರೀತ್ ಸಿಂಗ್ ಅವರು ಈ ಬಾರಿಯ ಟೋಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದ ಪರೇಡ್'ನಲ್ಲಿ ಭಾರತೀಯ ದಳವನ್ನು ಮುನ್ನಡೆಸಿದ್ದಾರೆ. * ಮೇರಿ ಕೋಮ್ ಅವರು ಬಾಕ್ಸಿಂಗ್ ವಿಭಾಗದವರು, ಹಾಗೂ ಮನ್ ಪ್ರೀತ್ ಸಿಂಗ್ ಅವರು ಪುರುಷರ ಹಾಕಿ ವಿಭಾಗದ ನಾಯಕರಾಗಿದ್ದಾರೆ. * ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾರತೀಯ ಕ್ರೀಡಾಪಟುಗಳ ತಂಡವು ಒಲಂಪಿಕ್ಸ್ ಕ್ರೀಡಾಂಗಣ ತಲುಪಿದ ನಂತರ ಭಾರತದ ಧ್ವಜವನ್ನು ಪ್ರದರ್ಶಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು. * ಈ ಟೋಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 25 ಭಾರತೀಯ ಸದಸ್ಯರನ್ನು ಒಳಗೊಂಡಿರುವ ತಂಡವು ಪಾಲ್ಗೊಂಡಿತ್ತು.