Job Description: * ರಾಜಸ್ಥಾನ ಸರ್ಕಾರ ತನ್ನ ರಾಜ್ಯದ ಜೋದ್ಪುರ ನಗರದ 5 ಖಾಸಗಿ ಆಸ್ಪತ್ರೆಗಳಿಗೆ 10 ಲಕ್ಷ ರೂ. ದಂಡ ವಿಧಿಸಿದೆ. * ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರವು ಪ್ರಸ್ತುತ ರಾಜ್ಯದಲ್ಲಿ ಹಲವಾರು ಯೋಜನೆಗಳು ಜಾರಿಗೆ ತಂದಿದೆ, ಅದರಲ್ಲಿ ಒಂದಾದ 'ಮುಖ್ಯಮಂತ್ರಿ ಚಿರಂಜೀವಿ ಸ್ವಾಸ್ಥ್ಯ ಬಿಮಾ ಯೋಜನೆ'ಯ ಅಡಿಯಲ್ಲಿ ರೋಗಿಗಳಿಗೆ ಸೌಲಭ್ಯ ಒದಗಿಸಿಕೊಡಲು ವಿಫಲವಾದ ಕಾರಣದಿಂದಾಗಿ ಜೋಧ್ಪುರದ 5ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ. * ಜೋಧ್ಪುರದ ಈ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಅಕ್ರಮವಾಗಿ ಹಣವನ್ನು ವಸೂಲಿ ಮಾಡಿದ್ದಾರೆ, ಈ ಕಾರಣದಿಂದಾಗಿ 10 ಲಕ್ಷ ರೂ.ಗಳನ್ನು ಮರುಪಾವತಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. * ರಾಜಸ್ಥಾನದ ಜೋಧ್ಪುರದ 5 ಖಾಸಗಿ ಆಸ್ಪತ್ರೆಗಳು ಕೋವಿಡ್-19 ಸಂಧರ್ಭದಲ್ಲಿ 'ಮುಖ್ಯಮಂತ್ರಿ ಚಿರಂಜೀವಿ ಸ್ವಾಸ್ಥ್ಯ ಬಿಮಾ ಯೋಜನೆ'ಯ ಅನುಕೂಲಗಳನ್ನು ಜನಸಾಮಾನ್ಯರಿಗೆ ನೀಡದೆ ಅಕ್ರಮವಾಗಿ ಹಣವನ್ನು ದೋಚಿದ್ದಾರೆ ಎಂದು ಸುಮಾರು 150 ರೋಗಿಗಳು 'ಸಂಪರ್ಕ್' ವೇದಿಕೆ ಮೂಲಕ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು.