Job Description: * ದೇಶಾದ್ಯಂತ ವಾರ್ಷಿಕವಾಗಿ ರಾಷ್ಟ್ರೀಯ ಪ್ರಸಾರ ದಿನವನ್ನು ಜುಲೈ. 23 ರಂದು ಆಚರಣೆ ಮಾಡಲಾಗುತ್ತದೆ. * ಭಾರತೀಯ ಪ್ರಸಾರ ಕಂಪನಿ 1927 ರಲ್ಲಿ ಬಾಂಬೆ ನಿಲ್ದಾಣದಿಂದ ರೇಡಿಯೋ ಪ್ರಸಾರವನ್ನು ಆರಂಭಿಸಿದೆ. * 1923 ರ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ರೇಡಿಯೊ ಕ್ಲಬ್ ಆಫ್ ಬಾಂಬೆಯ ಉಪಕ್ರಮದಡಿಯಲ್ಲಿ ರೇಡಿಯೋ ಪ್ರಸಾರ ಸೇವೆಗಳು ಆರಂಭಿಸಲಾಗಿದೆ, ಮತ್ತೇ ಬ್ರಿಟಿಷ್ ಸರ್ಕಾರವು 1930 ರಲ್ಲಿ ರೇಡಿಯೋ ಪ್ರಸಾರವನ್ನು ವಹಿಸಿಕೊಂಡು, ಭಾರತೀಯ ರಾಜ್ಯ ಪ್ರಸಾರ ಸೇವೆಯನ್ನು ಆರಂಭಿಸಿದರು. * ಬ್ರಿಟಿಷ್ ಸರ್ಕಾರವು ದೇಶದಲ್ಲಿ ಅಂದರೆ ಕಲ್ಕತ್ತಾ ಹಾಗೂ ಬಾಂಬೆ ನಗರಗಳಲ್ಲಿ ಎರಡು ರೇಡಿಯೊ ಕೇಂದ್ರಗಳನ್ನು ನಿರ್ವಹಿಸಲು ಅನುಮತಿ ನೀಡಿತು. * ಐಬಿಸಿಯನ್ನು 1932 ರಲ್ಲಿ ಶಾಶ್ವತವಾಗಿ ಭಾರತೀಯ ರಾಜ್ಯ ಪ್ರಸಾರ ಸೇವೆ ಎಂದು ಮರುನಾಮಕರಣ ಮಾಡಿತ್ತು, ತದನಂತರ 1936 ರ ಜೂನ್. 8 ರಂದು ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್ ಸರ್ವಿಸ್'ನ್ನು ಆಲ್ ಇಂಡಿಯಾ ರೇಡಿಯೋ ಎಂದು ಬದಲಾವಣೆ ಮಾಡಲಾಯಿತು, ಮತ್ತೇ 1957 ರಲ್ಲಿ ಆಕಾಶವಾಣಿ ಎಂದು ನಾಮಕರಣ ಮಾಡಲಾಯಿತು. * ಪ್ರಸಾರ್ ಭಾರತಿ ಭಾರತದ ಅತಿದೊಡ್ಡ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿದೆ, ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಒಡೆತನದಲ್ಲಿದೆ, ಅಖಿಲ ಭಾರತ ರೇಡಿಯೊದ ಸೇವೆಯು ದೇಶದಲ್ಲಿ 414 ಕೇಂದ್ರಗಳನ್ನು ಹೊಂದಿದೆ. * ಈ ಆಕಾಶವಾಣಿಯು 23 ಭಾಷೆಗಳು ಹಾಗೂ 146 ಉಪಭಾಷೆಗಳಲ್ಲಿ ಪ್ರಸಾರವಾಗುತ್ತದೆ.