Job Description: * ಯುನೆಸ್ಕೋ ‘ಐತಿಹಾಸಿಕ ನಗರ ಭೂ ದೃಶ್ಯ ಯೋಜನೆ’ ಅಡಿಯಲ್ಲಿ ಮಧ್ಯಪ್ರದೇಶ ರಾಜ್ಯದ ಓರ್ಚಾ ಮತ್ತು ಗ್ವಾಲಿಯರ್ ನಗರಗಳನ್ನು ಆಯ್ಕೆ ಮಾಡಿದೆ. * ಪ್ರಸ್ತುತ ಯುನೆಸ್ಕೋ ಈ ಯೋಜನೆಯನ್ನು 2011ರಲ್ಲಿ ಆರಂಭಿಸಿದೆ. * ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ವರ್ಚುವಲ್ ಸಭೆಯ ಮೂಲಕ ಓರ್ಚಾ ಮತ್ತು ಗ್ವಾಲಿಯರ್ ನಗರಗಳಿಗಾಗಿ ಯುನೆಸ್ಕೋದ ಐತಿಹಾಸಿಕ ನಗರ ಭೂದೃಶ್ಯ ಯೋಜನೆಯನ್ನು ಆರಂಭಿಸಿದರು. * ಯುನೆಸ್ಕೋದ ಐತಿಹಾಸಿಕ ನಗರ ಭೂದೃಶ್ಯ ಯೋಜನೆಯಲ್ಲಿ ಭಾರತದ ವಾರಣಾಸಿ ಮತ್ತು ಅಜ್ಮೀರ್ ನಗರ ಸೇರಿ ದಕ್ಷಿಣ ಏಷ್ಯಾದ 6 ನಗರಗಳುನ್ನು ಒಳಗೊಂಡಿತ್ತು, ಇದೀಗ ಗ್ವಾಲಿಯರ್ ಹಾಗೂ ಓರ್ಚಾವನ್ನು ದಕ್ಷಿಣ ಏಷ್ಯಾದ 7 ಮತ್ತು 8 ನೇ ನಗರಗಳಾಗಿ ಸೇರ್ಪಡೆಯಾಗಿವೆ. * ಈ ಯೋಜನೆಯಿಂದಾಗಿ ನಗರಗಳ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು, ಪ್ರಕೃತಿ ಮತ್ತು ಪರಂಪರೆಯ ಸಂಪೂರ್ಣ ಕಾಳಜಿಯನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಯುನೊಸ್ಕೊ ತಿಳಿಸಿದೆ.