Job Description: * ಪ್ರಸ್ತುತ ಇದೇ 2021 ರ ಜುಲೈ. 21 ರಂದು, 11 ನೇ ಮೆಕಾಂಗ್-ಗಂಗಾ ಸಹಕಾರ ಸಭೆ ಜರುಗಿದೆ. * ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು “ಸಾಮೂಹಿಕ ಮತ್ತು ಸಹಕಾರಿ” ಪ್ರತಿಕ್ರಿಯೆಗೆ ಈ ಸಭೆಯಲ್ಲಿ ವಿನಂತಿಸಿದ್ದಾರೆ, ಹಾಗೂ ಈ ಸಭೆಯಲ್ಲಿ ಆರ್ಥಿಕ, ಡಿಜಿಟಲ್ ಮತ್ತು ಜನರಿಂದ ಜನರ ಸಂಪರ್ಕದ ಮೂಲಕ ಈ ಪ್ರದೇಶದಲ್ಲಿ ಉತ್ತಮ ಸಂಪರ್ಕವನ್ನು ಉತ್ತೇಜಿಸಲು ಭಾರತ ಇಚ್ಛಿಸಿದೆ ಎಂದು ತಿಳಿಸಿದ್ದಾರೆ. * ಭಾರತವು ಮೆಕಾಂಗ್ ದೇಶಗಳೊಂದಿಗೆ ಸಹಕಾರದ ಹೊಸ ಕ್ಷೇತ್ರಗಳನ್ನು ಗುರುತಿಸಲು ಇಚ್ಛಿಸಿದೆ, ಇದರಿಂದಾಗಿ ಎರಡು ದೇಶಗಳ ಸಹಭಾಗಿತ್ವವನ್ನು ಉತ್ತಮವಾಗಲಿದೆ ಎಂದಿದ್ದಾರೆ. * ಈ ಹಿಂದೆ 2000 ರಲ್ಲಿ ಪ್ರವಾಸೋದ್ಯಮ, ಸಂಪರ್ಕ ಮತ್ತು ಸಂಸ್ಕೃತಿ ಮತ್ತು ಇತರ ಶ್ರೇಣಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಎಂಜಿಸಿ ಉಪಕ್ರಮವನ್ನು ಆರಂಭಿಸಿದ್ದಾರೆ. * 2000 ರಲ್ಲಿ ಆರಂಭಿಸಿರುವ ಈ ಎಂಜಿಸಿ ಉಪಕ್ರಮವು '6' ದೇಶಗಳನ್ನು ಒಳಗೊಂಡಿದೆ, ಅವುಗಳು: ಭಾರತ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳು.