Job Description: * ಆಂಧ್ರಪ್ರದೇಶ ರಾಜ್ಯದ ಮೂರು ಸ್ಮಾರಕಗಳನ್ನು ಆದರ್ಶ್ ಸ್ಮಾರಕ್ ಯೋಜನೆ ಅಡಿಯಲ್ಲಿ ಗುರುತಿಸಲಾಗಿದೆ, ಹಾಗೂ ಈ ಸ್ಮಾರಕಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವದು ಹಾಗೂ ಸ್ಮಾರಕಗಳನ್ನು ಪ್ರವಾಸಿ ತಾಣಗಳಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವರಾದ ಜಿ ಕಿಶನ್ ರೆಡ್ಡಿ ಅವರು ಈ ಆದರ್ಶ್ ಸ್ಮಾರಕ್ ಯೋಜನೆಯನ್ನು ಪ್ರಕಟಿಸಿದ್ದಾರೆ. * ಪ್ರಸ್ತುತ ಶ್ರೀಕಾಕುಲಂನ ಸಾಲಿಹುಂಡಂನಲ್ಲಿನ ಬೌದ್ಧ ಅವಶೇಷಗಳು, ಗುಂಟೂರಿನ ನಾಗಾರ್ಜುನಕೊಂಡ ಸ್ಮಾರಕಗಳು ಹಾಗೂ ಅನಂತಪುರದ ವೀರಭದ್ರ ದೇವಸ್ಥಾನಗಳನ್ನು ಆದರ್ಶ ಸ್ಮಾರಕ್ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * 2014 ರಲ್ಲಿ ಆದರ್ಶ್ ಸ್ಮಾರಕ್ ಯೋಜನೆಯನ್ನು ಸಂಸ್ಕೃತಿ ಸಚಿವಾಲಯವು ಆರಂಭಿಸಿದೆ, ಈ ಯೋಜನೆ ಅಡಿಯಲ್ಲಿ ದೇಶದಲ್ಲಿನ 100 ಸ್ಮಾರಕಗಳನ್ನು ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸಲು ಕೈಗೊಂಡಿರುವ ಯೋಜನೆ ಇದಾಗಿದೆ.