Job Description: * ಪ್ರಸ್ತುತ ಭಾರತೀಯ ಗಡಿ ಭದ್ರತಾ ಪಡೆ(BSF) ಹಾಗೂ ಪಾಕಿಸ್ತಾನ ಸೈನಿಕರು 2019 ರ ನಂತರ ಇದೇ ಮೊದಲ ಬಾರಿಗೆ ಬಕ್ರಿದ್ ಹಬ್ಬದ ಪ್ರಯುಕ್ತ ಗಡಿ ಭಾಗಗಳಲ್ಲಿ ಸಿಹಿತಿಂಡಿಗಳನ್ನು ಪರಸ್ಪರ ಹಂಚಿಕೊಂಡರು. * ಈ ಹಿಂದೆ ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರವು 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಆರ್ಟಿಕಲ್ 370 ರದ್ದುಪಡಿಸಿತ್ತು, ಆ ಸಮಯದಿಂದ ಪಾಕಿಸ್ತಾನ ರಾಷ್ಟ್ರದ ಸೈನಿಕರು ವಿನಿಮಯ ಮಾಡಿಕೊಳ್ಳುವದನ್ನು ನಿಲ್ಲಿಸಿದ್ದರು. * ಪ್ರಸ್ತುತ ಭಾರತೀಯ ರಾಜಸ್ಥಾನ ಹಾಗೂ ಪಂಜಾಬ್ನ ಅಮೃತಸರ ಜಿಲ್ಲೆಯ ಜೆಸಿಪಿ(ಜಂಟಿ ಚೆಕ್ ಪೋಸ್ಟ್) ಹಾಗೂ ಪಾಕಿಸ್ತಾನದ ವಾಗಾ ಗಡಿ ಪ್ರದೇಶದಲ್ಲಿ ಈ ಬಕ್ರಿದ್ ಹಬ್ಬದ ಸಂದರ್ಭದಲ್ಲಿ BSF ಹಾಗೂ ಪಾಕಿಸ್ತಾನ ಸೈನಿಕರ ಮಧ್ಯೆ ಸಿಹಿತಿಂಡಿಗಳ ವಿನಿಮಯ ನಡೆದಿದೆ ಎಂದು ಬಿಎಸ್ಎಫ್ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.