Job Description: * ಪ್ರಸ್ತುತ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರವು 2032 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಿದೆ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಈ ಆಯ್ಕೆಯ ಮಾಹಿತಿಯನ್ನು ಪ್ರಕಟಿಸಿದೆ. * ಆಸ್ಟ್ರೇಲಿಯಾ ಸುಮಾರು 32 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸುತ್ತಿದೆ, ಈ ಹಿಂದೆ 1956 ರಲ್ಲಿ ಮೆಲ್ಬರ್ನ್ನಲ್ಲಿ ಹಾಗೂ 2000 ರಲ್ಲಿ ಸಿಡ್ನಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲಾಗಿತ್ತು. * ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರ 72-5 ಮತಗಳಿಂದ ಒಲಿಂಪಿಕ್ಸ್ ಬಿಡ್'ನ್ನು ಪಡೆದುಕೊಂಡಿದೆ, ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಟಾಟ್ ಮಾರಿಸನ್ ತಿಳಿಸಿದ್ದಾರೆ. * 2024 ರ ಒಲಿಂಪಿಕ್ಸ್ ನ ಕ್ರೀಡಾಕೂಟವನ್ನು ಪ್ಯಾರಿಸ್ ಆಯೋಜಿಸಲಿದೆ, ಹಾಗೂ 2028 ರ ಒಲಿಂಪಿಕ್ಸ್'ನ ಕ್ರೀಡಾಕೂಟವನ್ನು ಲಾಸ್ ಎಂಜಲೀಸ್ ಆಯೋಜಿಸಲಿದೆ. * 2032 ರ ಒಲಿಂಪಿಕ್ಸ್ ನ ಕ್ರೀಡಾಕೂಟದ ಆತಿಥ್ಯವನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರವು ಆಯೋಜಿಸಲಿದೆ. * ಈ ಹಿಂದೆ 1900 ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ನ್ನು ಆಡಿಸಲಾಗಿತ್ತು.