Job Description: * ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪಂಜಾಬ್ ರಾಜ್ಯದ ರೋಪರ್ IIT ಯ ಸಂಶೋಧಕರು ಆಮ್ಲಜನಕ ಪಡಿತರ ಸಾಧನ 'ಆಮ್ಲೆಕ್ಸ್'ನ್ನು ಅಭಿವೃದ್ಧಿಪಡಿಸಿದ್ದಾರೆ. * ಈ ಆಮ್ಲಜನಕ ಸಾಧನವು ಸಿಲಿಂಡರ್ ಹಾಗೂ ರೋಗಿಯಿಂದ ಆಮ್ಲಜನಕದ ಹರಿವನ್ನು ನಿಯಂತ್ರಿಸುವ ಮೂಲಕ ಆಮ್ಲಜನಕ ವ್ಯರ್ಥವಾಗುವದನ್ನು ತಡೆಯುವಲ್ಲಿ ಸಹಾಯಕಾರಿಯಾಗಲಿದೆ. * ಈ ಆಮ್ಲಜನಕದ 'ಆಮ್ಲೆಕ್ಸ್' ಸಾಧನದಿಂದ ಸಿಲಿಂಡರ್'ನಲ್ಲಿನ ಆಮ್ಲಜನಕ ಉಳಿತಾಯವಾಗಲಿದೆ, ಹಾಗೂ ರೋಗಿ ಹಾಗೂ ಆಸ್ಪತ್ರೆಗಳಿಗೆ ಈ ಸಾಧನವು ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.