Job Description: * ಚೀನಾ ದೇಶವು ಗಂಟೆಗೆ 600 ಕಿಮೀ. ವೇಗದಲ್ಲಿ ಚಲಿಸುವ ರೈಲನ್ನು ಅಭಿವೃದ್ಧಿ ಪಡಿಸಿದೆ, ಈ ಹೊಸ ಮ್ಯಾಗ್ಲೆವ್ ರೈಲಿನ ಪರೀಕ್ಷಾರ್ಥ ಚಾಲನೆಯನ್ನು ನಡೆಸಲಾಗಿದೆ ಎಂದು ಚೀನಾ ಸರ್ಕಾರಿ ಮಾಧ್ಯಮವು ಮಾಹಿತಿ ನೀಡಿದೆ. * ಚೀನಾ ದೇಶವು ಈ ರೈಲನ್ನು ಕರಾವಳಿ ನಗರಿ ಕಿಂಗ್ಡೋದಲ್ಲಿ ನಿರ್ಮಾಣ ಮಾಡಿದೆ ಎಂದು ತಿಳಿಸಿದ್ದಾರೆ. * 'ಲೆವಿಟೇಟ್ಸ್ ಮ್ಯಾಗ್ಲೆವ್ ರೈಲು' ವಿದ್ಯುತ್-ಕಾಂತೀಯ ಬಲದಿಂದ ಚಲಿಸುವ ರೈಲಾಗಿದೆ, ಪ್ರಸ್ತುತ ಚೀನಾದಲ್ಲಿ ಬಳಕೆಮಾಡುತ್ತಿರುವ ರೈಲುಗಳ ಪೈಕಿ ಗರಿಷ್ಠ ವೇಗದ ರೈಲು ಇದಾಗಿದೆ ಎಂದು ತಿಳಿಸಿದ್ದಾರೆ. * ಚೀನಾ ದೇಶವು ಸರಿ ಸುಮಾರು 2ದಶಕಗಳಿಂದ ಸೀಮಿತ ಪ್ರದೇಶಗಳಲ್ಲಿ ವಿದ್ಯುತ್-ಕಾಂತೀಯ ಬಲದಿಂದ ಚಲಿಸುವ ರೈಲುಗಳನ್ನು ಬಳಸುತ್ತಿದೆ.