Job Description: * ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್ಟಿ ಪರಿಹಾರ ಮೊತ್ತದಲ್ಲಿ ಕರ್ನಾಟಕಕ್ಕೆ 12,702 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. * ಕೇಂದ್ರ ಸರ್ಕಾರವು 2020-21 ನೇ ಹಣಕಾಸು ವರ್ಷದ ರಾಜ್ಯಗಳಿಗೆ ನೀಡಬೇಕಾಗಿರುವ GST ಪರಿಹಾರದ ಬಾಕಿ ಮೊತ್ತವು ಒಟ್ಟು 81,179 ಕೋಟಿ ರೂ.ಗಳಷ್ಟಿದೆ, ಇದಲ್ಲದೇ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಮೇ ಅವಧಿಯಲ್ಲಿನ ಬಾಕಿ ಮೊತ್ತವು 55,345 ಕೋಟಿ ರೂ. ಇದೇ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ವರದಿ ನೀಡಿದ್ದಾರೆ. * ಈ ಹಿಂದಿನ ಹಣಕಾಸು ವರ್ಷದಲ್ಲಿನ 91 ಸಾವಿರ ಕೋಟಿ ರೂ. GST ಪರಿಹಾರ ಮೊತ್ತವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * 2020-21 ಕ್ಕೆ ಯಾವ ರಾಜ್ಯಗಳಿಗೆ ಎಷ್ಟು ಬಾಕಿ ಮೊತ್ತ: ಮಹಾರಾಷ್ಟ್ರ: 15,138 ಕೋಟಿ ರೂ. ಕರ್ನಾಟಕ: 7,202 ಕೋಟಿ ರೂ. ಉತ್ತರಪ್ರದೇಶ: 7,109 ಕೋಟಿ ರೂ. ಗುಜರಾತ್: 6,583 ಕೋಟಿ ರೂ. ತಮಿಳುನಾಡು: 6,155 ಕೋಟಿ ರೂ. ದೆಹಲಿ: 5,190 ಕೋಟಿ ರೂ. ಪಶ್ಚಿಮ ಬಂಗಾಳ: 3,911 ಕೋಟಿ ರೂ. ಪಂಜಾಬ್: 3,752 ಕೋಟಿ ರೂ. * 2021 ರ ಏಪ್ರಿಲ್-ಮೇ ಅವಧಿಗೆ ಬಾಕಿ ಮೊತ್ತ: ಮಹಾರಾಷ್ಟ್ರ: 7,995 ಕೋಟಿ ರೂ. ಕರ್ನಾಟಕ: 5,500 ಕೋಟಿ ರೂ. ಗುಜರಾತ್: 3,603 ಕೋಟಿ ರೂ.