Job Description: * ಕೇರಳ ರಾಜ್ಯ ಸರ್ಕಾರವು ಕೋವಿಡ್-19 ಲಾಕ್ಡೌನ್ ಸಮಯ ಹಾಗೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತೀಯಾಗಿ ಹೆಚ್ಚುತ್ತಿರುವ ದೌರ್ಜನ್ಯ ತಡೆಯುವ ಸಲುವಾಗಿ ಸಾರ್ವಜನಿಕ, ಖಾಸಗಿ ಮತ್ತು ಸೈಬರ್ ತಾಣಗಳಲ್ಲಿ ಮಹಿಳೆಯರು ಅವರಿಗಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳುಲು ಸಮಗ್ರ ಯೋಜನೆಯೊಂದನ್ನು ಪ್ರಾರಂಭಿಸಿದೆ. * ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ 'ಪಿಂಕ್ ಪ್ರೊಟೆಕ್ಷನ್' ಎಂಬ ಯೋಜನೆಗೆ ಚಾಲನೆ ನೀಡಿದರು, ಹಾಗೂ ರಾಜ್ಯ ಸರ್ಕಾರವು 10 ಕಾರುಗಳು, ಬುಲೆಟ್ಗಳು ಮತ್ತು 20 ಬೈಸಿಕಲ್ಗಳು ಸೇರಿ 40 ದ್ವಿಚಕ್ರ ವಾಹನಗಳನ್ನು ಈ ಯೋಜನೆಗಾಗಿ ಮೀಸಲಿಟ್ಟಿದೆ ಎಂದು ತಿಳಿಸಿದ್ದಾರೆ. * ಈ 'ಪಿಂಕ್ ಪ್ರೊಟೆಕ್ಷನ್' ಯೋಜನೆಯಿಂದಾಗಿ ವರದಕ್ಷಿಣೆಯ ಕಿರುಕುಳ, ದೌರ್ಜನ್ಯ, ಜಾಲತಾಣಗಳ ಮೂಲಕ ದೌರ್ಜನ್ಯ ಎಸಗುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ವಿರುದ್ಧ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳನ್ನು ತಡೆಯುಲು ಈ ಯೋಜನೆಯನ್ನು ಆರಂಭಿಸಿದ್ದಾರೆ.