Job Description: * ಪ್ರಸ್ತುತ 2014ರಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಮಾಸಿಕ(ತಿಂಗಳ) ರೇಡಿಯೋ ಕಾರ್ಯಕ್ರಮ ಆರಂಭಿಸಿದ್ದಾರೆ, ಈ ಕಾರ್ಯಕ್ರಮವು ಒಟ್ಟಾರೆ ಇಲ್ಲಿಯವರೆಗೆ 30.80 ಕೋಟಿ ರೂ.ಗಳಷ್ಟು ಆದಾಯವನ್ನು ಗಳಿಸಿದೆ. * 2017-18 ನೇ ಸಾಲಿನಲ್ಲಿ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮವು 10.64 ಕೋಟಿ ರೂ.ಗಳನ್ನು ಗಳಿಸಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಪ್ರಧಾನಿ ಮೋದಿಯವರ ಈ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದ ವಿವಿಧ ಚಾನೆಲ್ಗಳ ಮೂಲಕ ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗುತ್ತದೆ. * ಪ್ರಸಾರ್ ಭಾರತಿ 'ಮನ್ ಕಿ ಬಾತ್' ಕಾರ್ಯಕ್ರಮದ 78 ಸಂಚಿಕೆಗಳನ್ನು ತನ್ನ ಅಖಿಲ ಭಾರತ ರೇಡಿಯೋ ಹಾಗೂ ದೂರದರ್ಶನ ಜಾಲತಾಣದಲ್ಲಿ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಇಲ್ಲಿಯವರೆಗೆ ಪ್ರಸಾರ ಮಾಡಿದೆ' ಎಂದು ಮಾಹಿತಿ ಮತ್ತು ಪ್ರಸಾರ ಸಚಿವರಾಗಿರುವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ, ಹಾಗೂ ಸುಮಾರು 91 ಖಾಸಗಿ ಉಪಗ್ರಹ ಟಿವಿ ಚಾನೆಲ್ಗಳು ಈ ಕಾರ್ಯಕ್ರಮವನ್ನು ದೇಶಾದ್ಯಂತ ಕೇಬಲ್ ಮತ್ತು DTH ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರ ಮಾಡುತ್ತವೆ ಎಂದು ತಿಳಿಸಿದ್ದಾರೆ. * ಈ 'ಮನ್ ಕಿ ಬಾತ್' ಕಾರ್ಯಕ್ರಮವು: - 2014-15ರಲ್ಲಿ 1.16 ಕೋಟಿ ರೂ. - 2015-16ರಲ್ಲಿ 2.81 ಕೋಟಿ ರೂ. - 2016-17ರಲ್ಲಿ 5.14 ಕೋಟಿ ರೂ. - 2017-18ರಲ್ಲಿ 10.64 ಕೋಟಿ ರೂ. - 2018-19ರಲ್ಲಿ 7.47 ಕೋಟಿ ರೂ. - 2019-20ರಲ್ಲಿ 2.56 ಕೋಟಿ ರೂ. - 2020-21ರಲ್ಲಿ 1.02 ಕೋಟಿ ರೂ ಗಳಿಸಿದೆ.