Job Description: * ಪ್ರಸ್ತುತ ಹೊಸ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಪರೀಕ್ಷಾರ್ಥ ಉಡಾವಣೆಯನ್ನು ರಷ್ಯಾ ಸೇನೆಯು ಯಶಸ್ವಿಯಾಗಿಸಿದೆ. * ಈ ಕ್ರೂಸ್ ಕ್ಷಿಪಣಿಯನ್ನು ರಷ್ಯಾದ ಉತ್ತರದ ಶ್ವೇತ ಸಾಗರದಲ್ಲಿನ ಅಡ್ಮಿರಲ್ ಗ್ರೋಷ್ಕೋವ್ ಯುದ್ಧ ನೌಕೆಯಿಂದ ಉಡಾಯಿಸಲಾಗಿದೆ, ಈ ಕ್ಷಿಪಣಿಯ ಸುಮಾರು 350 ಕಿ.ಮೀ. ದೂರದಲ್ಲಿನ ಗುರಿಯನ್ನು ಬೇಧಿಸಿ ಯಶಸ್ವಿಯಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. * ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿರುವ ಮಾಹಿತಿಯ ಪ್ರಕಾರ, ರಷ್ಯಾದ ಈ ಹೊಸ ಜಿರ್ಕಾನ್ ಕ್ಷಿಪಣಿ 1,000 ಕಿ. ಮೀ. (ಸುಮಾರು 620 ಮೈಲಿ) ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ, ಅಂದರೆ ಶಬ್ದದ ಒಂಬತ್ತು ಪಟ್ಟು ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.