Job Description: * ಪ್ರಸ್ತುತ ರಕ್ಷಣಾ ಸಚಿವಾಲಯದ ಸೂಚನೆಯ ಪ್ರಕಾರ ಕಾರವಾರ ನೌಕಾನೆಲೆ ಹಾಗೂ ಶಸ್ತ್ರಾಗಾರ ವಲಯದ ವಜ್ರ ಕೋಶದ ಮೇಲೆ ಡ್ರೋನ್ ಹಾರಾಟವನ್ನು ನಿಷೇಧಿಸಿ ನೋ ಪ್ಲೈಯಿಂಗ್ ಝೋನ್ ಎಂದು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಶನ್ ಅಧಿಕೃತ ಆದೇಶವನ್ನು ಹೊರಡಿಸಿದೆ. * ಪ್ರಸ್ತುತ ಕಾರವಾರ ನೌಕಾನೆಲೆಯ 3 ಕಿ.ಮೀ .ವ್ಯಾಪ್ತಿಯಲ್ಲಿ ಮತ್ತು ವಜ್ರಕೋಶದ ಪ್ರದೇಶದ ಮೇಲೆ ಡ್ರೋನ್ ಹಾರಾಟ ಹಾಗೂ ಮಾನವ ರಹಿತ ವಿಮಾನ ಹಾರಿಸುವುದರ ಮೇಲೆ ನಿರ್ಬಂಧವನ್ನು ಹೇರಿದೆ. * ಈ ಡ್ರೋನ್ ಹಾರಾಟ ನಿಷೇಧ ಸಂಬಂಧ ಸಿವಿಲ್ ಏವಿಯೇಶನ್'ಗೆ ಕರ್ನಾಟಕ ನೇವಲ್ ಬೇಸ್ ಕಮಾಂಡರ್'ನಿಂದ ಪತ್ರ ಬರೆಯಲಾಗಿತ್ತು, ಇದನ್ನು ಪರಿಗಣಿಸಿದ ರಕ್ಷಣಾ ಸಚಿವಾಲಯ ನೋ ಪ್ಲೇಯಿಂಗ್ ಝೋನ್ ಬಗ್ಗೆ ನೋಟಿಫೀಕೇಶನ್ ಮತ್ತು ಅಧಿಕೃತ ಆದೇಶ ಹೊರಡಿಸಿ ಪ್ರಕಟಣೆ ನೀಡಿದೆ.