Job Description: * 2022ರ ಆಗಸ್ಟ್ ನಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಸುಮಾರು 40 ನಗರಗಳನ್ನು ಸಂಪರ್ಕಿಸುವ 10 ನೂತನ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಇಲಾಖೆ ಸಿದ್ಧವಾಗಿದೆ. * ವಂದೇ ಭರತ್' ಗೆ ಉತ್ತೇಜನ ನೀಡಲು ಸ್ವದೇಶಿ ಸೆಮಿಸ್ಪೀಡ್ ರೈಲು ವ್ಯವಸ್ಥೆಯನ್ನು ಒದಗಿಸಲು ಭಾರತೀಯ ರೈಲ್ವೆ ಸಿದ್ಧವಾಗಿದೆ ಎಂದು ನೂತನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ತಿಳಿಸಿದ್ದಾರೆ. * ಪ್ರಸ್ತುತ 44 ಸ್ವದೇಶಿ ವಂದೇ ಭಾರತ್ ರೈಲುಗಳಿಗೆ ವಿದ್ಯುತ್ ವ್ಯವಸ್ಥೆಗಳನ್ನು ಒದಗಿಸಲು ಹೈದರಾಬಾದ್'ನ ಮೇಧಾ ಇಂಜಿನಿಯರಿಂಗ್ ಸಂಸ್ಥೆಯು ಗುತ್ತಿಗೆಯನ್ನು ಪಡೆದುಕೊಂಡಿದೆ. * ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್ಲ ಟ್ರಯಲ್ಗಳನ್ನು ಪೂರೈಸಿ ಕನಿಷ್ಠ ಎರಡು ಮೂಲಮಾದರಿಗಳನ್ನು ಪೂರೈಸುವಂತೆ ರೈಲ್ವೆ ಇಲಾಖೆಯು ಆ ಸಂಸ್ಥೆಗೆ ಸೂಚಿಸಿದೆ, ಹಾಗೂ ಈ 2022 ಡಿಸೆಂಬರ್ ಅಥವಾ 2023 ರ ಆರಂಭದಲ್ಲಿ ಈ ರೈಲುಗಳನ್ನು ಮೊದಲ ಕಾರ್ಯಾಚರಣೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ. * ವಂದೇ ಭಾರತ್ ದೇಶದ ಸ್ವಂತ ನಿರ್ಮಾಣದ ಸೆಮಿ ಹೈಸ್ಪೀಡ್ ರೈಲು ಆಗಿದೆ, ಇದು 16 ಬೋಗಿಗಳನ್ನು ಒಳಗೊಂಡಿರಲಿದೆ, ಅಲ್ಲದೇ ಸಂಪೂರ್ಣವಾಗಿ ವಿದ್ಯುತ್ಚಾಲಿತ ರೈಲಾಗಿರುತ್ತದೆ.