Job Description: * ಭಾರತದ ಜಯನಗರ ಮತ್ತು ನೇಪಾಳದ ಕುರ್ತಾ ನಗರಗಳ ಮಧ್ಯೆ 2021 ರ ಜುಲೈ. 18 ರಂದು ರೈಲು ಸಂಚಾರದ ಪ್ರಯೋಗವನ್ನು ಯಶಸ್ವಿಗೊಳಿಸಲಾಗಿದೆ. * ಈ ಎರಡು ದೇಶಗಳ ನಡುವಿನ ಮೊದಲ ರೈಲು ವಿಭಾಗದ ಮಾರ್ಗವಾಗಿದೆ, ಈ ರೈಲು ಮಾರ್ಗ ನೇಪಾಳದ ಮಹೋತಾರಿ ಜಿಲ್ಲೆಯ ಕುರ್ತಾ ನಗರದಿಂದ ಭಾರತದ ಬಿಹಾರ ರಾಜ್ಯದ ಮಧುಬನಿ ಜಿಲ್ಲೆಯ ಜಯನಗರಕ್ಕೆ ಹೊಂದಿಕೊಂಡು ಸಂಪರ್ಕ ಬೆಳೆಸಲಿದೆ. * ಈ ರೈಲು ಮಾರ್ಗ ನಿರ್ಮಾಣದ ವಿಭಾಗಕ್ಕೆ ಒಟ್ಟಾರೆ 619 ಕೋಟಿ ವೆಚ್ಚವಾಗಿದೆ, ಈ ರೈಲು ಮಾರ್ಗಕ್ಕೆ ಧನಸಹಾಯನ್ನು ಭಾರತ ಸರ್ಕಾರದಿಂದ ಪಡೆಯಲಾಗಿದೆ, ಹಾಗೂ ಇದನ್ನು ಭಾರತ - ನೇಪಾಳ ಸ್ನೇಹ ರೈಲು ಯೋಜನೆ ಅಡಿಯಲ್ಲಿ ಐಆರ್ಕಾನ್ ಜಯನಗರ - ಕುರ್ತಾ ರೈಲ್ವೆ ಸ್ಥಾಪನೆ ಮಾಡಿದೆ. * ಶೀಘ್ರದಲ್ಲೇ ಈ ವಿಭಾಗದ ರೈಲು ಸಂಚಾರ ಆರಂಭವಾಗಲಿದೆ ಎಂದು ಪೂರ್ವ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ರಾಜೇಶ್ ಕುಮಾರ್ ಅವರು ತಿಳಿಸಿದ್ದಾರೆ. ಉಳಿದಿರುವ 34 ಕಿ.ಮೀ ರೈಲು ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುವುದು. * ಇರ್ಕಾನ್ (IRCON) ಇಂಟರ್ನ್ಯಾಷನಲ್ ಅಥವಾ ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ (constraction) ಲಿಮಿಟೆಡ್ ಎನ್ನುವದು ಭಾರತೀಯ ರೈಲ್ವೆಯ ಅಂಗಸಂಸ್ಥೆಯಾಗಿದೆ ಹಾಗೂ ನಿರ್ಮಾಣ ಮತ್ತು ಎಂಜಿನಿಯರಿಂಗ್ ವಿಭಾಗದ ನಿಗಮ ಇದಾಗಿದೆ. * ಭಾರತೀಯ ರೈಲ್ವೆಯ ಈ ಅಂಗಸಂಸ್ಥೆ1976 ರಲ್ಲಿ ಸ್ಥಾಪನೆ ಮಾಡಲಾಗಿದೆ, ಈ ಇರ್ಕಾನ್ ಭಾರತದಲ್ಲಿ 1650 ಕ್ಕೂ ಅಧಿಕ ಮೂಲಸೌಕರ್ಯ ಯೋಜನೆಗಳನ್ನು ಪೂರೈಸಿದೆ. * ಪ್ರಸ್ತುತ ಎಂ.ಕೆ.ಸಿಂಗ್ ಅವರು ಇರ್ಕಾನ್ ಅಂಗಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.