Job Description: * ಇತಿಹಾಸ ತಜ್ಞ, ಸಂಶೋಧಕ ನಿಧಿನ್ ಓಲಿಕಾರ್ ಅವರು ನಡೆಸಿರುವ ಸಂಶೋಧನೆಯ ಹಾಗೂ ಹುಡುಕಾಟದ ಪ್ರತಿ ಫಲವಾಗಿ ಟಿಪ್ಪು ಸುಲ್ತಾನ್ ಜನ್ಮದಿನ 1751 ರ ಡಿಸೆಂಬರ್. 1 ಎಂದು ದೃಢಪಟ್ಟಿದೆ. * ಇಲ್ಲಿಯವರೆಗೆ ಟಿಪ್ಪು ಜನ್ಮದಿನವನ್ನು 1750 ರ ನವೆಂಬರ್. 20 ಎಂದು ತಿಳಿಯಲಾಗಿತ್ತು, ಪ್ರಸ್ತುತ ನಿಧಿನ್ ಓಲಿಕಾರ್ ಅವರು ಲಂಡನ್ ಮ್ಯೂಸಿಯಂನ ಅಧಿಕೃತ ಪತ್ರಗಳ ಸಮಗ್ರ ಅಧ್ಯಯನವನ್ನು ನಡೆಸಿದ್ದಾರೆ, ಈ ಸಂಶೋಧನೆಯಲ್ಲಿ ಮುಖ್ಯವಾಗಿರುವ 3 ದಾಖಲೆಗಳನ್ನೂ ಸಲ್ಲಿಸಿದ್ದಾರೆ. * ಪ್ರಸ್ತುತ ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾಗಿರುವ ಇತಿಹಾಸ ತಜ್ಞ ಪ್ರೊ.ಶೇಖ್ ಅಲಿ ಅವರು ಈ ದಾಖಲೆಗಳನ್ನೂ ಅನುಮೋದಿಸಿದ್ದಾರೆ, ಹಾಗೂ ಅಧ್ಯಯನ ನಡೆಸಿರುವ ಸಂಪೂರ್ಣ ವಿವರಗಳನ್ನು ಒಳಗೊಂಡಿರುವ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ, ಹಾಗೂ ಮುಂಬರುವ ದಿನಗಳಲ್ಲಿ ಟಿಪ್ಪು ಜನ್ಮದಿನವನ್ನು 1751 ರ ಡಿಸೆಂಬರ್. 1 ಆಗಬೇಕು ಎಂದು ವಿನಂತಿ ಮಾಡಿದ್ದಾರೆ. * ನಿಧಿನ್ ಓಲಿಕಾರ್ ಅವರು ಲಂಡನ್ಗೆ ಹೋದ ಸಂಧರ್ಭದಲ್ಲಿ ಅಲ್ಲಿರುವಂಥಹ ಬ್ರಿಟಿಷ್ ಗ್ರಂಥಾಲಯದಲ್ಲಿ ಟಿಪ್ಪು ಸುಲ್ತಾನ್'ಗೆ ಸಂಬಂಧಿಸಿದ ಪರ್ಶಿಯನ್ ಭಾಷೆಯಲ್ಲಿನ 'ಫತೇ ಉಲ್ ಮುಜಾಹಿದ್ದೀನ್' ಹಸ್ತಪ್ರತಿಕ್ಕೆ ಇವರಿಗೆ ದೊರಕಿದೆ, ಈ ಹಸ್ತಪ್ರತಿಕ್ಕೆಯ ಟಿಪ್ಪು ಸುಲ್ತಾನ್ ಅವರೇ ಬರೆಸಿರುವ ಕೈಪಿಡಿಯಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಲಂಡನ್ ಬ್ರಿಟಿಷ್ ಗ್ರಂಥಾಲಯದಲ್ಲಿ ಲಭಿಸಿರುವ ಈ ಕೈಪಿಡಿಯಲ್ಲಿ ಜಕ್ರಿ ಮಾಸದ 14 ನೇ ದಿನ 1165 ಇಜ್ರಿ ದಿನ ಸೂರ್ಯೋದಯವಾದ 10 ಗಂಟೆಗಳ ನಂತರ ನನ್ನ ಜನ್ಮದಿನ ಆಚರಿಸಬೇಕು, ಹಾಗೂ ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಈ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.