Job Description: * ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನೇ ಆವರಿಸಿಕೊಂಡಿದೆ, ಇದರ ಮಧ್ಯೆ ಇದೀಗ ಚೀನಾ ದೇಶದಲ್ಲಿ ಮಂಕಿ ಬಿ ವೈರಸ್'ನಿಂದಾಗಿ ಮೊದಲ ಸಾವಿನ ಪ್ರಕರಣ ವರದಿಯಾಗಿದೆ. * ಪ್ರಸ್ತುತ ಚೀನಾ ದೇಶದ ಗ್ಲೋಬಲ್ ಟೈಮ್ಸ್ ನೀಡಿರುವ ವರದಿ ಪ್ರಕಾರ, ಬೀಜಿಂಗ್ ಮೂಲದ ಪ್ರಾಣಿ ವೈದ್ಯ 'ಮಂಕಿ ಬಿ' ವೈರಸ್ನಿಂದ ಸಾವನ್ನಪಿದ್ದರೆ ಎಂದು ತಿಳಿಸಿದೆ, ಹಾಗೂ ಈ 'ಮಂಕಿ ಬಿ' ಸೋಂಕಿನಿಂದ ಮೊದಲ ಸಾವು ಚೀನಾದಲ್ಲಿ ಸಂಭವಿಸಿದೆ. * ಪ್ರಸ್ತುತ ಚೀನಾ ದೇಶದ ಸಸ್ತನಿಗಳ ಸಂಶೋಧನಾ ಕೇಂದ್ರದಲ್ಲಿ ಈ ಹಿಂದೆ ಮಾರ್ಚ್ ತಿಂಗಳಲ್ಲಿ 2 ಮೃತ ಮಂಗಗಳ ದೇಹವನ್ನು ಪರೀಕ್ಷಿಸಲಾಗಿದೆ, ನಂತರ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ 53 ವರ್ಷ ವಯಸ್ಸಿನ ಪುರುಷ ವೈದ್ಯನಿಗೆ ಒಂದು ತಿಂಗಳ ಬಳಿಕ ವಾಕರಿಕೆ ಮತ್ತು ವಾಂತಿ ಶುರುವಾಗಿ ಈ 'ಮಂಕಿ ಬಿ' ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಚೀನಾದ ರೋಗ ನಿಯಂತ್ರಣ ಹಾಗೂ ಪ್ರತಿಬಂಧ ಕೇಂದ್ರವು ಮಾಹಿತಿಯನ್ನು ದೃಢಪಡಿಸಿದೆ.