Job Description: * ಸಂಸತ್ತಿನ ಮುಂಗಾರು ಅಧಿವೇಶನವು ಇಂದಿನಿಂದ ಆರಂಭವಾಗಲಿದೆ, ಪ್ರಸ್ತುತ ಈ ಅಧಿವೇಶನದಲ್ಲಿ ಸದ್ಯ ರಾಷ್ಟ್ರದಲ್ಲಿನ ಸಮಸ್ಯೆಗಳಾಗಿರುವ ಇಂಧನ ಬೆಲೆ ಏರಿಕೆ, ಕೊರೊನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆ ವಿಚಾರಗಳನ್ನು ಚರ್ಚೆ ಮಾಡುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗಿದೆ. * ಪ್ರಸ್ತುತ 17 ನೇ ಲೋಕಸಭೆಯ ಮುಂಗಾರು ಅಧಿವೇಶನ ಇವತ್ತಿನಿಂದ ಅಂದರೆ ಜುಲೈ 19 ರಿಂದ ಪ್ರಾರಂಭವಾಗಿ ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ. * ಈ ಬಾರಿಯ ಮುಂಗಾರು ಅಧಿವೇಶನದಲ್ಲಿ 17 ಹೊಸ ವಿಧೇಯಕಗಳನ್ನು ಮಂಡಿಸಿ, ಅನುಮೋದನೆ ಪಡೆಯಲು ಸರಕಾರ ಸಿದ್ಧವಾಗಿದೆ, ಈ ಅಧಿವೇಶನವು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಏಕಕಾಲಕ್ಕೆ ಕಲಾಪ ನಡೆಯಲಿದೆ ಒಟ್ಟಾರೆ 19 ಕಲಾಪಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.