Job Description: * ಇತ್ತೀಚಿಗೆ ನಡೆದ ICCಯ 78 ನೇ ವಾರ್ಷಿಕ ಸಾಮಾನ್ಯ ವರ್ಚುವಲ್ ಸಭೆಯಲ್ಲಿ 3 ರಾಷ್ಟ್ರಗಳಿಗೆ ಮಾನ್ಯತೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಐಸಿಸಿ ತಿಳಿಸಿದೆ. * ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಸದಸ್ಯತ್ವವನ್ನು ಮಂಗೋಲಿಯ, ತಜಿಕಿಸ್ತಾನ ಹಾಗೂ ಸ್ವಿಟ್ಜರ್ಲೆಂಡ್ ದೇಶಗಳು ಪಡೆದುಕೊಂಡಿವೆ. * ಏಷ್ಯಾ ವಲಯದಿಂದ ಮಂಗೋಲಿಯ ಮತ್ತು ತಜಿಕಿಸ್ತಾನ ರಾಷ್ಟ್ರಗಳು 22 ಮತ್ತು 23 ನೇ ಸದಸ್ಯರಾಗಿ ಸೇರಿಸಲಾಗಿದೆ, ಮತ್ತು ಯುರೋಪ್ನಿಂದ 35 ನೇ ಸದಸ್ಯ ರಾಷ್ಟ್ರವಾಗಿ ಸ್ವಿಟ್ಜರ್ಲೆಂಡ್ಗೆ ಮಾನ್ಯತೆ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ. * ಒಟ್ಟಾರೆ ಇದೀಗ 'ಐಸಿಸಿ'ಯಲ್ಲಿ 106 ಸದಸ್ಯ ಹಾಗೂ 94 ಸಹಸದಸ್ಯ ರಾಷ್ಟ್ರಗಳಿವೆ. * ಮಂಗೋಲಿಯನ್ ಕ್ರಿಕೆಟ್ ಸಂಸ್ಥೆಯು 2007ರಲ್ಲಿ ಸ್ಥಾಪನೆಯಾಗಿದೆ, ಹಾಗೂ ಅಧಿಕೃತ ರಾಷ್ಟ್ರೀಯ ಆಡಳಿತಾಧಿಕಾರಿಯನ್ನು 2018 ರಲ್ಲಿ ಪಡೆದುಕೊಂಡಿದೆ. * 2014 ರಲ್ಲಿ ಸ್ವಿಟ್ಜರ್ಲೆಂಡ್'ನಲ್ಲಿ ಕ್ರಿಕೆಟ್ ಸಂಸ್ಥೆಯನ್ನು ಉದ್ಘಾಟಣೆ ಮಾಡಲಾಗಿದೆ. * 2011 ರಲ್ಲಿ ತಜಿಕಿಸ್ತಾನದಲ್ಲಿ ಕ್ರಿಕೆಟ್ ಫೆಡರೇಷನ್ ಪ್ರಾರಂಭಿಸಲಾಗಿದೆ.