Job Description: * ಕೇಂದ್ರ ಸರ್ಕಾರವು ಇದೀಗ ರಾಜ್ಯದಿಂದ ಜಿಲ್ಲಾ ಖನಿಜ ಪ್ರತಿಷ್ಠಾನ ( District Mineral Funds-DMF) ನಿಧಿಯ ಸಂಪೂರ್ಣ ನಿಯಂತ್ರಣವನ್ನು ತಗೆದುಕೊಂಡಿದೆ. * ಗಣಿ ಸಚಿವಾಲಯದ ಮಾಹಿತಿಯ ಪ್ರಕಾರ ಈ ಕ್ರಮವು ಅನಿವಾರ್ಯವಾಗಿದೆ ಎಂದಿದ್ದರು, ಪ್ರಸ್ತುತ DMF ನ ಹಣವನ್ನು ಖಜಾನೆಗೆ ಅಥವಾ ರಾಜ್ಯ ಮಟ್ಟದ ನಿಧಿಗಳ ಏಕೀಕೃತ ನಿಧಿಗೆ ಅಥವಾ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ವರ್ಗಾಯಿಸುವ ನಿದರ್ಶನಗಳಿವೆ ಎಂದು ತಿಳಿಸಿದ್ದಾರೆ. * ಜಿಲ್ಲಾ ಖನಿಜ ನಿಧಿಗಳು ಕಾಯ್ದೆ 2015 ರ ಪ್ರಕಾರ ಗಣಿಗಾರಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದ ಪೀಡಿತ ವ್ಯಕ್ತಿಗಳ ಆಸಕ್ತಿ ಮತ್ತು ಪ್ರಯೋಜನಗಳಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ DMF ಗಳನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರಗಳು ಕಡ್ಡಾಯವಾಗಿವೆ, ಹಾಗೂ ರಾಜ್ಯ ಸರ್ಕಾರಗಳಿಗೆ ರಾಯಧನವನ್ನು ಪಾವತಿಸುವುದರ ಹೊರತಾಗಿ ಗುತ್ತಿಗೆದಾರರು ಈ ಲಾಭರಹಿತ ಅಡಿಪಾಯಗಳಿಗೆ ನಿರ್ದಿಷ್ಟ ಶೇಕಡಾವಾರು ರಾಯಧನವನ್ನು ನೀಡುವದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ. * ಗಣಿಗಾರಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದ ಪೀಡಿತ ವ್ಯಕ್ತಿಗಳು ಮತ್ತು ಪ್ರದೇಶಗಳ ಕಲ್ಯಾಣಕ್ಕಾಗಿ DMF ಗಳು ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. * ಈ ಯೋಜನೆಯನ್ನು 'ಪ್ರಧಾನ್ ಮಂತ್ರಿ ಖಾನೀಜ್ ಕ್ಷೇತ್ರ ಕಲ್ಯಾಣ್ ಯೋಜನೆ' ಎಂದು ಬುಡಕಟ್ಟು ಜನಸಂಖ್ಯೆಯು ಪ್ರಧಾನ ಫಲಾನುಭವಿಗಳು ಕರೆಯುತ್ತಾರೆ.