Job Description: * ಚೀನಾದಿಂದ ಹಿಮಾಚಲ ಪ್ರದೇಶದ ಕುಲ್ಲು ಎಂಬಲ್ಲಿ ‘ಸನ್ಯಾಸಿ ಹಣ್ಣು’ ಕೃಷಿ ಪ್ರಾರಂಭವಾಗಿದೆ. * ಈ ಹಣ್ಣನ್ನು ಹಿಮಾಚಲ ಪ್ರದೇಶದಲ್ಲಿ ಕ್ಷೇತ್ರ ಪ್ರಯೋಗಗಳಿಗಾಗಿ ಪ್ತ್ರಸ್ತುತ ಕೌನ್ಸಿಲ್ ಆಫ್ ಸೈಂಟಿಫಿಕ್ ರಿಸರ್ಚ್ ಅಂಡ್ ಇಂಡಸ್ಟ್ರಿಯಲ್ ಟೆಕ್ನಾಲಜಿ-ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋ-ರಿಸೋರ್ಸ್ ಟೆಕ್ನಾಲಜಿ ಪರಿಚಯಿಸಿದೆ. * ಸನ್ಯಾಸಿ ಹಣ್ಣು ನೈಸರ್ಗಿಕ ಸಿಹಿಕಾರಕ ಎಂದು ಹೆಸರುವಾಸಿ. * ಈ ಸನ್ಯಾಸಿ ಹಣ್ಣುನ ಬೀಜಗಳನ್ನು ಚೀನಾದಿಂದ ಆಮದು ಮಾಡಿಕೊಂಡು ಮನೆಯಲ್ಲಿ ಬೆಳೆದ 3 ವರ್ಷಗಳ ನಂತರ ಕ್ಷೇತ್ರ ಪ್ರಯೋಗಗಳುನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. * ಹಿಮಾಚಲ ಪ್ರದೇಶದ ರೈಸನ್ ಗ್ರಾಮದ ರೈತನ ಹೊಲಗಳಲ್ಲಿ ಕ್ಷೇತ್ರ ಪ್ರಯೋಗಗಳಿಗಾಗಿ 50 ಮೊಳಕೆ ಗಿಡಗಳನ್ನು ನೆಡಲಾಯಿತು ಮತ್ತು ರೈತನೊಂದಿಗೆ ‘ವಸ್ತು ವರ್ಗಾವಣೆ ಒಪ್ಪಂದ’ ಸಹಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ, ಈ ಹೊಸ ಬೆಳೆಯಿಂದಾಗಿ ಆರ್ಥಿಕ ಲಾಭ ಹೆಕ್ಟೇರಿಗೆ 3 ಲಕ್ಷದಿಂದ 3.5 ಲಕ್ಷ ರೂ. ಪಡೆಯಬಹುದಾಗಿದೆ. * ಈ ಸನ್ಯಾಸಿ ಹಣ್ಣು ದೀರ್ಘಕಾಲಿಕ ಬೆಳೆಯಾಗಿದೆ, ಈ ಬೆಳೆ ಸರಿ ಸುಮಾರು 4 ರಿಂದ 5 ವರ್ಷಗಳ ಜೀವಿತಾವಧಿಯನ್ನು ಹೊಂದಿರಲಿದೆ, ಈ ಬೆಳೆ 8 ರಿಂದ 9 ತಿಂಗಳ ನಂತರ ಹಣ್ಣು ಬಿಡಲು ಪ್ರಾರಂಭಿಸುತ್ತದೆ. * ಈ ಹಣ್ಣುನ್ನು ಮೊದಲು ಬೌದ್ಧ ಸನ್ಯಾಸಿಗಳು ಬಳಸಿದ್ದರಿಂದ ಈ ಹೆಸರನ್ನು ಪಡೆದುಕೊಂಡಿದೆ.