Job Description: * ಪ್ರಸ್ತುತ ದೆಹಲಿ ಸರ್ಕಾರವು ಗೂಗಲ್ ಕಂಪನಿಯ ಸಹಯೋಗದೊಂದಿಗೆ ದೆಹಲಿಯ ಪ್ರಯಾಣಿಕರಿಗೆ ಬಸ್ಗಳ ನೈಜ ಸಮಯದ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡಲಿವೆ. * ದೆಹಲಿ ನಗರದ ಬಸ್ ಗಳ ಆಗಮನದ ಹಾಗೂ ನಿರ್ಗಮನ ಸಮಯ ಹಾಗೂ ಅವುಗಳ ಮಾರ್ಗಗಳು ಒಳಗೊಂಡ ನೈಜ ಸಮಯದ ಮಾಹಿತಿಯನ್ನು ನೀಡಲು ಗೂಗಲ್ ಮತ್ತು ದೆಹಲಿ ಸಾರಿಗೆ ಸಚಿವಾಲಯದ ಮಧ್ಯೆ ಒಪ್ಪಂದವಾಗಿದೆ. * ಪ್ರಸ್ತುತ ದೆಹಲಿಯ 3,000 ಬಸ್ಗಳ ನೈಜ ಸ್ಥಿತಿ ಲೈವ್ ಆಗಿವೆ, ಅತೀ ಶೀಘ್ರದಲ್ಲೇ ಹೆಚ್ಚಿನ ಡಿಟಿಸಿ(DTC) ಬಸ್ಗಳನ್ನು ಸಂಯೋಜಿಸಲಾಗುವುದು ಎಂದು ದೆಹಲಿ ಸರ್ಕಾರ ತಿಳಿಸಿದೆ. * ಈ ಯೋಜನೆಯ ಮೂಲಕ ದೆಹಲಿ ಬಸ್ಗಳ ನೈಜ ಸ್ಥಳ ಹಾಗೂ ಸಮಯದ ಮಾಹಿತಿ ಸಿಗಲಿದೆ, ಹಾಗೂ ಪ್ರಯಾಣಿಕರಿಗೆ ಎಲ್ಲಾ ಮಾರ್ಗಗಳು, ಬಸ್ ನಿಲ್ದಾಣಗಳು, ಬಸ್ ಆಗಮನ ಮತ್ತು ನಿರ್ಗಮನ ಸಮಯದ ಜೊತೆಗೆ ಬಸ್ ಸಂಖ್ಯೆಗಳ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.