Job Description: * 2021 ರ ಜುಲೈ. 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯುವ ಕೌಶಲ್ಯ ದಿನಾಚರಣೆ ಮತ್ತು ಸ್ಕಿಲ್ ಇಂಡಿಯಾ ಮಿಷನ್ನ 6 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. * ಶ್ರೀಯುತ ಪ್ರಧಾನ ಮಂತ್ರಿ ಮೋದಿ ಅವರು ಸ್ಕಿಲ್ ಇಂಡಿಯಾ ಮಿಷನ್'ನ 6ನೇ ವಾರ್ಷಿಕೋತ್ಸವದಲ್ಲಿ ಪ್ರಸ್ತುತ ಹೊಸ ಪೀಳಿಗೆಯ ಯುವಕರ ಕೌಶಲ್ಯ ಅಭಿವೃದ್ಧಿ ರಾಷ್ಟ್ರೀಯ ಅಗತ್ಯ ಮತ್ತು ಸ್ವಾವಲಂಬಿ ಭಾರತಕ್ಕೆ ಒಂದು ದೊಡ್ಡ ಅಡಿಪಾಯವಾಗಿದೆ ಎಂದು ತಿಳಿಸಿದರು, ಹಾಗೂ 1.25 ಕೋಟಿ ಯುವಕರಿಗೆ ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಕೌಶಲ್ಯ ಅಭಿವೃದ್ಧಿಗಾಗಿ ಹೊಸದಾಗಿ 75 ಜೆಎಸ್ಎಸ್ (ಜನಶಿಕ್ಷಣ ಸಂಸ್ಥಾನ) ಹಾಗೂ ಜೆಎಸ್ಎಸ್ಗಾಗಿ ಪೋರ್ಟಲ್'ನ್ನು ಪಿಎಂ ಘೋಷಿಸಿದ್ದಾರೆ, ಈ ಪೋರ್ಟಲ್ ಕಡಿಮೆ ವೆಚ್ಚದಲ್ಲಿ ವೃತ್ತಿಪರ ಕೌಶಲ್ಯ ತರಬೇತಿಯನ್ನು ನೀಡಲು ಅನುಕೂಲವಾಗಲಿದೆ. * ಜನ್ ಶಿಕ್ಷನ್ ಸಂಸ್ಥಾನ್ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು, ಇದರ ಜೊತೆಯಲ್ಲಿ ದೇಶದ ಯುವಕರನ್ನು ಪರಿಗಣಿಸಿ ಸಂಯೋಜಿತ ಕಲಿಕಾ ಕೋರ್ಸ್ಗಳನ್ನು ಸಹ ಘೋಷಣೆ ಮಾಡಲಾಗುವದು ಎಂದು ತಿಳಿಸಿದ್ದಾರೆ. * ಡೈರೆಕ್ಟರೇಟ್ ಜನರಲ್ ಆಫ್ ಟ್ರೈನಿಂಗ್ 57 ಉದ್ಯಮ ಹೊಸ ಕೋರ್ಸ್ಗಳ ಪಠ್ಯಕ್ರಮವನ್ನು ಆರಂಭಿಸುತ್ತದೆ, ಹಾಗೂ 2018-20 ರ ಡಿಜಿಟಿ ಶೈಕ್ಷಣಿಕ ಅಧಿವೇಶನದ ಟಾಪರ್ಗಳಿಗೆ ಗೌರವನ್ನು ನೀಡಲಾಗುವದು. * ಭಾರತ ಸರ್ಕಾರವು ಸ್ಕಿಲ್ ಇಂಡಿಯಾ ಮಿಷನ್'ನ ಅಡಿಯಲ್ಲಿ ವಿವಿಧ ಉದ್ಯೋಗದ ವಿಭಾಗಳಲ್ಲಿ 40 ಕೋಟಿ ಭಾರತೀಯರಿಗೆ ತರಬೇತಿ ನೀಡಲು ಸ್ಕಿಲ್ ಇಂಡಿಯಾ ಮಿಷನ್ ಉಪಕ್ರಮವನ್ನು ಆರಂಭಿಸಿದೆ.