Job Description: * "ವಾಯ್ಸ್ ಆಫ್ ಅಮೆರಿಕ" ಬಾಂಗ್ಲಾದೇಶ ಹಾಗೂ ಭಾರತದ ಮೂರು ರಾಜ್ಯಗಳಲ್ಲಿ ಸತತವಾಗಿ 63 ವರ್ಷಗಳಿಂದ "ಬಾನುಲಿ ಸೇವೆ"ಯನ್ನು ನೀಡಿತಿತ್ತು, ಆದರೆ ಇದೇ ಜುಲೈ 17 ರಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸುವದಾಗಿ ಪ್ರಕಟಣೆ ಹೊರಡಿಸಿದೆ. * ವಾಯ್ಸ್ ಆಫ್ ಅಮೆರಿಕ ಬಾನುಲಿ ಸೇವೆಯನ್ನು FM ಹಾಗೂ ಶಾರ್ಟ್ವೇವ್ ಮೂಲಕ ಬಾಂಗ್ಲಾದೇಶ, ಭಾರತದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾ ಈ 3 ರಾಜ್ಯಗಳಲ್ಲಿ ಆರು ದಶಕಗಳಿಗಿಂತ ಅಧಿಕವಾಗಿ ರೇಡಿಯೊ ಪ್ರಸಾರವನ್ನು ಮಾಡುತಿತ್ತು. * 1958 ರ ಜನೇವರಿಯಲ್ಲಿ ಅಂದರೆ ಬಾಂಗ್ಲಾದೇಶವು ಪೂರ್ವ ಪಾಕಿಸ್ತಾನವಾಗಿರುವ ಸಂಧರ್ಭದಲ್ಲಿ 'ವಾಯ್ಸ್ ಆಫ್ ಅಮೆರಿಕ' ರೇಡಿಯೊ ಪ್ರಸಾರವನ್ನು ಆರಂಭಿಸಿತ್ತು, ಆ ಸಮಯದಲ್ಲಿ ಇಲ್ಲೇ ಯಾವುದೇ ರೀತಿಯ ದೂರದರ್ಶನ ಹಾಗೂ ಖಾಸಗಿ ರೇಡಿಯೊ ಸ್ಟೇಷನ್ ಇರಲಿಲ್ಲವೆಂದು ವಿಒಎ ಉಸ್ತುವಾರಿ ಕಾರ್ಯಕ್ರಮ ನಿರ್ದೇಶಕ ಜಾನ್ ಲಿಪ್ಪಮ್ಯಾನ್ ಅವರು ಮಾಹಿತಿ ನೀಡಿದ್ದಾರೆ.