Job Description: * ಕೇಂದ್ರ ಸಚಿವ ಪಿಯೂಶ್ ಗೋಯಲ್ ರಾಜ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಾಯಕರಾಗಿ ಆಯ್ಕೆಯಾಗಿದ್ದಾರೆ, ಈ ಮೊದಲು ಈ ಸ್ಥಾನವನ್ನು ಥಾವರ್ ಚಂದ್ ಗೆಹ್ಲೋಟ್ ಅಲಂಕರಿಸಿದ್ದರು. * ಪ್ರಸ್ತುತ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನಲೆಯಿಂದಾಗಿ ಪಿಯೂಷ್ ಗೋಯಲ್ ಅವರನ್ನು ರಾಜ್ಯಸಭಾ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಪಿಯೂಷ್ ಗೋಯಲ್ ಅವರು 2010 ರಿಂದ ರಾಜ್ಯ ಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಹಾಗೂ ಈ ಮೊದಲು ಇವರು ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ಇದೇ ಜುಲೈ. 8 ರಂದು ವಾಣಿಜ್ಯ, ಕೈಗಾರಿಕೆ, ಆಹಾರ ಹಾಗೂ ಸಾರ್ವಜನಿಕ ಸರಬರಾಜು, ಜವಳಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.