Job Description: * ಪೂರ್ವ ನೇಪಾಳದಲ್ಲಿ 679 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲು, ನೇಪಾಳ ಭಾರತದ ಸತ್ಲುಜ್ ಜಲ ವಿದ್ಯಾತ್ ನಿಗಮ್ (SJVN) ದೊಂದಿಗೆ ಪರಸ್ಪರ ಒಪ್ಪಿಕೊಂಡು 1.3 ಬಿಲಿಯನ್ USDಒಪ್ಪಂದ ಮಾಡಿಕೊಂಡಿದೆ. * ಪ್ರಸ್ತುತ ಭಾರತವು ಕೈಗೆತ್ತಿಕೊಂಡ ನೇಪಾಳದ 2ನೇ ಮೆಗಾ ಉದ್ಯಮ ಇದಾಗಿದೆ, ಅಲ್ಲದೇ ಏಕೈಕ ಅತಿದೊಡ್ಡ ವಿದೇಶಿ ಹೂಡಿಕೆ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ. * ನೇಪಾಳದ ಹೂಡಿಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಶೀಲ್ ಭಟ್ಟ ಮತ್ತು ಕಠ್ಮಂಡುವಿನ ಎಸ್ಜೆವಿಎನ್ ನಂದ್ ಲಾಲ್ ಶರ್ಮಾ ಅವರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ಸಹಿ ಹಾಕಿದ್ದಾರೆ. * ಲೋವರ್ ಅರುಣ್ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್'ನ ಈ ಯೋಜನೆಯು 679 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ, ಈ ಯೋಜನೆಯು ಪ್ರಾಂತ್ಯ 1ರ ಸಂಖುವಸಭಾ ಮತ್ತು ಭೋಜ್ಪುರ ಜಿಲ್ಲೆಗಳಲ್ಲಿದೆ, ಈ ಜಲವಿದ್ಯುತ್ ಯೋಜನೆಯಿಂದಾಗಿ ಸುತ್ತಮುತ್ತಲಿನಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡುವ ಉದ್ದೇಶದ ಈ ಯೋಜನೆಯದಾಗಿದೆ. * ಅರುಣ್ ನದಿಯು ನೇಪಾಳದ ಮೂಲಕ ಹಾದುಹೋಗುವ ಅತಿದೊಡ್ಡ ಟ್ರಾನ್ಸ್-ಹಿಮಾಲಯನ್ ನದಿಯಾಗಿದೆ.