Job Description: * ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ಗೆ 119 ಕ್ರೀಡಾಪಟುಗಳಲ್ಲಿ 67 ಪುರುಷರು ಹಾಗೂ 52 ಮಹಿಳಾ ಸ್ಪರ್ಧಿಗಳು 18 ಕ್ರೀಡಾ ವಿಭಾಗಗಳಲ್ಲಿ 130 ಕೋಟಿ ಭಾರತೀಯರನ್ನು ಪ್ರತಿನಿಧಿಸಲಿದ್ದಾರೆ. * 2020 ಬೇಸಿಗೆ ಒಲಿಂಪಿಕ್ಸ್ ಅಂತರರಾಷ್ಟ್ರೀಯ ಬಹು-ಕ್ರೀಡಾ ಕಾರ್ಯಕ್ರಮವು ಇದೇ ಜುಲೈ 23 ರಿಂದ ಆಗಸ್ಟ್ 8, 2021ರವರೆಗೆ ಜಪಾನ್ನ ಟೋಕಿಯೊದಲ್ಲಿ ನಡೆಯುತ್ತವೆ, ಈ ಮೊದಲು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು 2020ರಲ್ಲಿ ನಡೆಯಲು ನಿರ್ಧಾರವನ್ನು ಕೈಗೊಳ್ಳಲಾಗಿತ್ತು ಆದರೆ COVID-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈವೆಂಟ್ ಮುಂದೂಡಲ್ಪಟ್ಟಿತು, ಈ ಬಾರಿಯ ನಡೆಯುವ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಪ್ರೇಕ್ಷಕರಿಗೆ ಅನುಮತಿನೀಡಲಾಗಿಲ್ಲ ಎಂದು ತಿಳಿಸಿದೆ. * ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಉದ್ದೇಶಗಳಿಗಾಗಿ ಈ ಈವೆಂಟ್ 2021ಕ್ಕೆ ಮರು ನಿಗದಿಪಡಿಸಿದೆ, ಆದರೆ ಟೋಕಿಯೋ 2020 ಹೆಸರನ್ನು ಬಳೆಸಲು ಉದ್ದೇಶಿಸಲಾಗಿದೆ. * ಒಲಿಂಪಿಕ್ ಕ್ರೀಡಾಕೂಟವನ್ನು ಇದೇ ಮೊದಲ ಬಾರಿಗೆ ಮುಂದೂಡಿ ಮತ್ತು ಮರು ನಿಗದಿಪಡಿಸಿ ನಡೆಸಲಾಗುತ್ತಿದೆ ಆದರೆ ಇದುವರೆಗೆ ರದ್ದುಗೊಳಿಸಿಲ್ಲ. * 2013ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ನಡೆದ 125 ನೇ ಐಒಸಿ ಅಧಿವೇಶನದಲ್ಲಿ ಟೋಕಿಯೊವನ್ನು ಆತಿಥೇಯ ನಗರವಾಗಿ ಆಯ್ಕೆ ಮಾಡಲಾಗಿದೆ. * ಪ್ರಸ್ತುತ ಜಪಾನ್ ದೇಶವು 2ನೇ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ, ಈ ಮೊದಲು 1964ರಲ್ಲಿ ಟೋಕಿಯೋ ಒಲಿಂಪಿಕ್ ಆಯೋಜಿಸಿತ್ತು. * ಇದೀಗ ಬೇಸಿಗೆ ಕ್ರೀಡಾಕೂಟವನ್ನು 2 ಬಾರಿ ಆಯೋಜಿಸಿದ ಏಷ್ಯಾದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಟೋಕಿಯೊ ಪಾತ್ರವಾಗಿದೆ.