Job Description: * ಪ್ರಸ್ತುತ ಭಾರತ ದೇಶವು 2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಆತಿಥ್ಯ ವಹಿಸಲಿದೆ ಎಂದು BWF ಪ್ರಕಟಣೆ ಹೊರಡಿಸಿದೆ. 2023 ರ ಸುದೀರ್ಮನ್ ಕಪ್ ಟೂರ್ನಿಯ (ವಿಶ್ವ ಮಿಕ್ಸೆಡ್ ಡಬಲ್ಸ್ ಸ್ಪರ್ಧೆ) ಆತಿಥ್ಯವನ್ನು ಚೀನಾ ದೇಶ ವಹಿಸಲಿದೆ. * ಭಾರತಕ್ಕೆ ಎರಡನೇ ಬಾರಿ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಆತಿಥ್ಯ ಲಭಿಸಿದೆ, ಈ ಮೊದಲು 2009ರಲ್ಲಿ ಭಾರತವು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಕೂಟವನ್ನು ಹೈದರಾಬಾದ್ನಲ್ಲಿ ನಡೆಸಿತ್ತು. * ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ್ ಬಿಸ್ವ ಶರ್ಮ ಅವರು ಭಾರತಕ್ಕೆ ಲಭಿಸಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಆತಿಥ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * ಭಾರತವು 2026 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಕೂಟವನ್ನು ನಡೆಸುವ ಸ್ಥಳವನ್ನು ಮುಂದೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.