Job Description: * ಪ್ರಸ್ತುತ ಲಡಾಖ್'ನ ಎಲ್ಲಾ ನಿವಾಸಿಗಳು ಹಾಗೂ ಅತಿಥಿ ಜನಸಂಖ್ಯೆಗೆ ಲಸಿಕೆ ಹಾಕಿದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿದೆ, ಜೀವನೋಪಾಯವನ್ನು ಗಳಿಸುವ ವಲಸೆ ಕಾರ್ಮಿಕರು, ಹೋಟೆಲ್ ಕಾರ್ಮಿಕರೆಲ್ಲರಿಗೂ ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಲಾಗಿದೆ. * ಲಡಾಖ್ ನೀಡಿರುವ ಮಾಹಿತಿಯ ಪ್ರಕಾರ ಎಲ್ಲಾ ಅರ್ಹ ವಯೋಮಾನದ ಜನ ಸಂಖ್ಯೆಗೆ ಅಂದರೆ ಒಟ್ಟು 89,404 ಜನರಿಗೆ ಕೋವಿಡ್-19 ಲಸಿಕೆಯ ಮೊದಲ ಪ್ರಮಾಣವನ್ನು ನೀಡಲಾಗಿದೆ, ಅಲ್ಲದೇ 2ನೇ ಡೋಸ್ ಲಸಿಕೆಯನ್ನು ಸುಮಾರು 60,936 ಜನರಿಗೆ ನೀಡಲಾಗಿದೆ. * ಈ ಕೇಂದ್ರಾಡಳಿತ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 6,821 ನೇಪಾಳದ ನಾಗರಿಕರಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಗಿದೆ. * ಲಡಾಖ್ ಭಾರತದ ಕೇಂದ್ರ ಪ್ರದೇಶವಾಗಿದೆ ಹಾಗೂ ಇದು ಕಾಶ್ಮೀರದ ದೊಡ್ಡ ಪ್ರದೇಶದ ಭಾಗವಾಗಿದೆ, ಇಷ್ಟೇ ಅಲ್ಲದೇ ಭಾರತ, ಪಾಕಿಸ್ತಾನ ಮತ್ತು ಚೀನಾ ನಡುವಿನ ವಿವಾದದ ಪ್ರದೇಶವಾಗಿದೆ. * ಪ್ರಸ್ತುತ 'ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ'ಯನ್ನು ಅಂಗೀಕರಿಸಿದ ನಂತರ ಲಡಾಖ್'ನ್ನು 2019ರ ಅಕ್ಟೋಬರ್ 31ರಂದು ಕೇಂದ್ರ ಪ್ರದೇಶವಾಗಿ ಸ್ಥಾಪನೆ ಮಾಡಲಾಗಿದೆ.