Job Description: * ಪ್ರಸ್ತುತ 2022ರ ಪದ್ಮ ಪ್ರಶಸ್ತಿಯ ನಾಮಪತ್ರ ಕಳುಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಆಹ್ವಾನಿಸಿದ್ದಾರೆ. ಪ್ರತಿವರ್ಷ ಗಣರಾಜ್ಯೋತ್ಸವದದಿನದಂದು ಪದ್ಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗುತ್ತದೆ. * 2020ರ ಹೊತ್ತಿಗೆ ಭಾರತ ದೇಶದ ಅತ್ಯುನ್ನತ ನಾಗರಿಕ ಗೌರವಗಳಾಗಿರುವ ಪದ್ಮಾ ಪ್ರಶಸ್ತಿಗಳುನ್ನು 3123 ಜನರು ಸ್ವೀಕರಿಸಿದ್ದಾರೆ. * ಈ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: - ಪದ್ಮವಿಭೂಷಣ- ಈ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. - ಪದ್ಮಭೂಷಣ- ಉನ್ನತ ಕ್ರಮಾಂಕದ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. - ಪದ್ಮಶ್ರೀ- ವಿಶೇಷ ಸೇವೆಯನ್ನು ಗೌರವಿಸಲು ಇದನ್ನು ನೀಡಲಾಗುತ್ತದೆ. * ಪ್ರಸ್ತುತ 1954ರಲ್ಲಿ ಪದ್ಮಾ ಪ್ರಶಸ್ತಿಗಳನ್ನು ಸ್ಥಾಪನೆ ಮಾಡಲಾಗಿದೆ, ಶಿಕ್ಷಣ, ಕಲೆ, ಸಾಹಿತ್ಯ, ಉದ್ಯಮ, ಕ್ರೀಡೆ, ವಿಜ್ಞಾನ, ಔಷದ, ಸಾಮಾಜಿಕ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳಂತಹ ವಿವಿಧ ಕ್ಷೇತ್ರಗಳಲ್ಲಿ ಜನಗಳ ವಿಶಿಷ್ಟ ಕೊಡುಗೆಯನ್ನು ಗುರುತಿಸಲು ಭಾರತದ ನಾಗರಿಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.