Job Description: * ಪ್ರಸ್ತುತ ಯುಕೆ ಮತ್ತು ಭಾರತದ ನಡುವಿನ ವ್ಯಾಪಾರ ಸಹಭಾಗಿತ್ವವನ್ನು ಬಲಪಡಿಸುವ ಸಲುವಾಗಿ ಯುನೈಟೆಡ್ ಕಿಂಗ್ಡಮ್ 50 ವರ್ಷಗಳಲ್ಲಿ ಮೊದಲ ಬಾರಿಗೆ ಸೇಬನ್ನು ಭಾರತಕ್ಕೆ ರಫ್ತು ಮಾಡಿದೆ. * ಈ ಹಿಂದೆ 2021ರ ಮೇ ತಿಂಗಳಿನಲ್ಲಿ ಈ ಎರಡು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಒಪ್ಪಿಗೆ ನೀಡಿರುವ ವರ್ಧಿತ ವ್ಯಾಪಾರ ಸಹಭಾಗಿತ್ವದ ಅಡಿಯಲ್ಲಿ ಈ ಸೇಬುಗಳನ್ನು ರಫ್ತು ಮಾಡಲಾಯಿತು. * ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು 30 ಪಚಾರಿಕವಾಗಿ ಒಪ್ಪಂದಕ್ಕೆ ಸಹಿ ಹಾಕಿದರು ಹಾಗೂ 2030ರ ಹೊತ್ತಿಗೆ ಯುನೈಟೆಡ್ ಕಿಂಗ್ಡಮ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತವು ಯುನೈಟೆಡ್ ಕಿಂಗ್ಡಮ್'ನಲ್ಲಿ 2ನೇ ಅತಿದೊಡ್ಡ ಹೂಡಿಕೆದಾರವಾಗಿದೆ, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಜಿ 20 ಹೂಡಿಕೆದಾರರಲ್ಲಿ ಯುಕೆ 2ನೇ ಸ್ಥಾನದಲ್ಲಿದೆ.