Job Description: * ಪ್ರಸ್ತುತ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್'ನಲ್ಲಿ ಪಾಚಿ, ಜರೀಗಿಡ ಹಾಗೂ ಶಿಲೀಂಧ್ರಗಳು ಮತ್ತು ಏಕಕೋಶೀಯ ಸಸ್ಯಗಳಿರುವ ದೇಶದ ಮೊದಲ ಉದ್ಯಾನ(ಕ್ರಿಪ್ಟೋಗ್ಯಾಮಿಕ್ ಗಾರ್ಡನ್)ವನ್ನು ಡೆಹ್ರಾಡೂನ್ ಜಿಲ್ಲೆಯ ಚಕರಾತಾ ಪಟ್ಟಣದಲ್ಲಿ ಉದ್ಘಾಟಣೆ ಮಾಡಲಾಗಿದೆ. * ಡೆಹ್ರಾಡೂನ್ ಜಿಲ್ಲೆಯ ಚಕರಾತಾ ಪಟ್ಟಣದ ದೇವವನದಲ್ಲಿ 50 ಪ್ರಭೇದಗಳಿಗೆ ಸೇರಿದ ಸಸ್ಯಗಳನ್ನು ಬೆಳೆಸಲಾಗಿದೆ, ಈ ಗಾರ್ಡನ್ 9 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ್ದಾರೆ, ಇದನ್ನು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಉದ್ಘಾಟಿಣೆ ಮಾಡಿದ್ದಾರೆ. * ಸಸ್ಯಶಾಸ್ತ್ರ ನೀಡಿರುವ ಮಾಹಿತಿಯ ಪ್ರಕಾರ ಈ ಪಾಚಿ, ಶಿಲೀಂಧ್ರ, ಜರೀಗಿಡಗಳು "ಕ್ರಿಪ್ಟೋಗ್ಯಾಮೆ" ಪ್ರಭೇದಕ್ಕೆ ಸೇರಿವೆ ಎನ್ನಲಾಗಿದೆ, ಇವುಗಳು ನಾಳ ರಹಿತ ಸಸ್ಯಗಳಾಗಿವೇ ಹಾಗೂ ಹೂ ಅಥವಾ ಬೀಜಗಳ ಮೂಲಕ ಸಂತಾನೋತ್ಪತ್ತಿ ನಡೆಸುವುದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಸಂಜೀವ್ ಚತುರ್ವೇದಿ ಮಾಹಿತಿ ನೀಡಿದ್ದಾರೆ. * ಡೆಹ್ರಾಡೂನ್ ಜಿಲ್ಲೆಯ ಚಕರಾತಾ ಪಟ್ಟಣದ ದೇವವನವು ಇಂತಹ ಸಸ್ಯಗಳನ್ನು ಬೆಳೆಯಲು ಉತ್ತಮವಾದ ಪ್ರದೇಶವಾಗಿದೆ ಹಾಗೂ ಇಲ್ಲಿ ಮಾಲಿನ್ಯದ ಪ್ರಮಾಣವು ಕಡಿಮೆಯಿದೆ, ಈ ಕಾರಣದಿಂದಾಗಿ 3 ಎಕರೆ ಪ್ರದೇಶದ ಗಾರ್ಡನ್'ನಲ್ಲಿ ಸಸ್ಯಗಳನ್ನು ಬೆಳೆಸಲಾಗಿದೆ.