Job Description: * ಅಮೆರಿಕ ಅಧಕ್ಷ ಜೋ ಬೈಡನ್ ಅವರು ಲಾಸ್ ಏಂಜಲೀಸ್ ಮೇಯರ್'ಆಗಿರುವ ಎರಿಕ್ ಗಾರ್ಸೆಟಿ ಅವರನ್ನು ಭಾರತಕ್ಕೆ ಹೊಸ ಯುಎಸ್ ರಾಯಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. * ಇದರೊಂದಿಗೆ ಬಾಂಗ್ಲಾದೇಶಕ್ಕೆ ಪೀಟರ್ ಡಿ ಹಾಸ್, ಮತ್ತು ಚಿಲಿ ದೇಶಕ್ಕೆ ಬೆರ್ನಡೆಟ್ ಮೀಹಾನ್ ಅವರನ್ನುರಾಯಭಾರಿಯಾಗಿ ನೇಮಕ ಮಾಡಿದ್ದಾರೆ. * ಎರಿಕ್ ಗಾರ್ಸೆಟ್ಟಿ ಅವರು 2013 ರಿಂದ ಲಾಸ್ ಏಂಜಲೀಸ್ ನಗರದ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ, ಮತ್ತು 12 ವರ್ಷ ಕೌನ್ಸಿಲ್ ಸದಸ್ಯರಾಗಿರುವ ಅನುಭವ ಹಾಗೂ ಲಾಸ್ ಏಂಜಲೀಸ್ ಮೇಟ್ರೋ ಸಾರಿಗೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.