Job Description: * ಪ್ರಸ್ತುತ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯವನ್ನು ಸರ್ಬಿಯಾದ ಟೆನಿಸ್ ಆಟಗಾರ ನುವಾಕ್ ಜಾಕೋವಿಚ್ ಅವರು 20 ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ, ಇದು ಇವರ 6ನೇ ವಿಂಬಲ್ಡನ್ ಟೂರ್ನಿಯಾಗಿದೆ. * ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನುವಾಕ್ ಜಾಕೋವಿಚ್ ಅವರು ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-7, 6-4, 6-4, 6-3 ನೇರ ಸೆಟ್'ಗಳ ಅಂತರದಲ್ಲಿ ಸೋಲಿಸಿದ್ದಾರೆ. * ನುವಾಕ್ ಜಾಕೋವಿಚ್ ಅವರು ಈ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದ ಮೂಲಕ 20 ಗ್ರಾಂಡ್ ಸ್ಲಾಮ್ ಗೆದ್ದ ದಾಖಲೆಯನ್ನು ನಿರ್ಮಿಸಿದರು.